ಅಧ್ಯಕ್ಷರಾಗಿ ಯೂಸುಫ್ ಸಿ ಕೆ, ಉಪಾಧ್ಯಕ್ಷೆಯಾಗಿ ಲಲಿತ ಆಯ್ಕೆ
ಬಡಗನ್ನೂರು : ಮಾಡನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಎಸ್.ಡಿ.ಯಂ.ಸಿ ರಚನಾ ಸಭೆಯು ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಕುಮಾರ್ ಮಣಿಯಾಣಿ ರವರ ಅಧ್ಯಕ್ಷತೆಯಲ್ಲಿ ಫೆ.17 ರಂದು ನಡೆಯಿತು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ಮೋನಪ್ಪ ಪೂಜಾರಿ ಕೆರೆಮಾರು ಹಾಗೂ ವಿನಯ್ ಉಪಸ್ಥಿತರಿದ್ದರು.
ಸಮಿತಿ ರಚನೆ ;-
ಶಾಲಾ ನೂತನ ಎಸ್.ಡಿ.ಯಂ.ಸಿ ಅಧ್ಯಕ್ಷರಾಗಿ ಯೂಸುಫ್ ಸಿ ಕೆ, ಉಪಾಧ್ಯಕ್ಷೆಯಾಗಿ ಲಲಿತ ರವರನ್ನು ಆಯ್ಕೆ ಮಾಡಲಾಯಿತು.ಸದಸ್ಯರುಗಳಾಗಿ, ಪೌಝೀಯಾ, ಕವಿತಾ, ಅಸ್ಮಾ,ಲೀಲಾವತಿ, ಜಮೀಳಾ ಅಬ್ದುಲ್ ಖಾದರ್, ವಿನಯ, ಆಯಿಷಾ, ಫಾಯಿಝ ರಾಬಿಯಾ, ಮಲ್ಲು, ಉಮೈರಾ, ಜುಲೈಕಾ, ನೆಬೀಸಾ, ರಂಸೀನಾ ನೆಸೀರರವರನ್ನು ಆಯ್ಕೆ ಮಾಡಲಾಯಿತು.

ಪದನಿಮಿತ್ತ ಸದಸ್ಯರುಗಳಲ್ಲಿ ಕಾರ್ಯದರ್ಶಿಯಾಗಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಸಂತೋಷ್ ಮಿಸ್ಕಿತ್, ಅರೋಗ್ಯ ಕಾರ್ಯಕರ್ತೆ ನವ್ಯ, ಅಂಗನವಾಡಿ ಕಾರ್ಯಕರ್ತೆ ಉಷಾಪೂರ್ಣ ಆಯ್ಕೆ ಮಾಡಲಾಯಿತು. ನಾಮನಿರ್ದೇಶನ ಸದಸ್ಯರಾಗಿ ಅರಿಯಡ್ಕ ಗ್ರಾ.ಪಂ ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು, ಶಿಕ್ಷಕ ಪ್ರತಿನಿಧಿಯಾಗಿ ಸುಪ್ರಿಯಾ ಎಸ್, ವಿದ್ಯಾರ್ಥಿ ಪ್ರತಿನಿಧಿಯಾಗಿ ಮಹಮ್ಮದ್ ಅಫ್ತಾಬ್ ಇವರನ್ನು ಆಯ್ಕೆ ಮಾಡಲಾಯಿತು..
ಶಾಲಾ ದಾಖಲಾತಿಗೆ ಚಾಲನೆ:-
1 ನೇ ತರಗತಿಗೆ ದಾಖಲಾಗಲಿರುವ ವಿದ್ಯಾರ್ಥಿ ಆದಿತ್ಯನನ್ನು ಸ್ವಾಗತಿಸುವ ಮೂಲಕ ಶಾಲಾ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.