ಪುತ್ತೂರು: ಪುತ್ತೂರು ಮುಖ್ಯರಸ್ತೆಯ ಜಿ.ಎಲ್ ಆಚಾರ್ಯ ಮುಂಭಾಗದ ಸಿಪಿಸಿ ಕಾಂಪ್ಲೆಕ್ಸ್ ನಲ್ಲಿ ರೆಂಟಲ್ ಆ್ಯಂಡ್ ಸೇಲ್ಸ್ ಆಭರಣ ಮಳಿಗೆ ಶಾನ್ವಿ ಜ್ಯುವೆಲ್ಲರಿ ಫೆ.21ರಂದು ಶುಭಾರಂಭಗೊಳ್ಳಲಿದೆ.
ಬೆಳಿಗ್ಗೆ ಮುಂಡೂರು ಸಂತೋಷ್ ಭಟ್ ರವರ ಪೌರೋಹಿತ್ಯದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಗಣ್ಯರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯೊಂಂದಿಗೆ ಸಂಸ್ಥೆ ಶುಭಾರಂಭಗೊಳ್ಳಲಿದೆ.
ನೂತನ ಸಂಸ್ಥೆಯಲ್ಲಿ ವಿಶಿಷ್ಟ ವಿನ್ಯಾಸದ ಪ್ರೀಮಿಯಂ ಗುಣಮಟ್ಟದ ಆಭರಣಗಳು ಖರೀದಿ ಹಾಗೂ ಬಾಡಿಗೆಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಸುಶ್ಮಿತಾ ನಿಧಿನ್ ಹಾಗೂ ಮೇಘನಾ ದೀಪಕ್ ತಿಳಿಸಿದ್ದಾರೆ.