ಪುಣ್ಚಪ್ಪಾಡಿ ಸಾರಕರೆಬೀಡು ಧರ್ಮನಡಾವಳಿ ಜಾತ್ರೋತ್ಸವದ ಕೃತಜ್ಞತಾ ಸಭೆ

0

ಎಲ್ಲರ ಸಹಕಾರ ಪ್ರೋತ್ಸಾಹದಿಂದ ಕಾರ್‍ಯಕ್ರಮ ಯಶಸ್ವಿ- ಮಹಾಬಲ ಶೆಟ್ಟಿ ಕೊಮ್ಮಂಡ

ಪುತ್ತೂರು: ಫೆ. 15 ಮತ್ತು 16 ರಂದು ನಡೆದ ಪುಣ್ಚಪ್ಪಾಡಿ ಗ್ರಾಮದ ಸಾರಕರೆಬೀಡು ಶ್ರೀ ಧರ್ಮಅರಸು ಉಳ್ಳಾಕುಲು ಪರಿವಾರ ದೈವಗಳ ಧರ್ಮ ನಡಾವಳಿ, ಜಾತ್ರೋತ್ಸವ ಕಾರ್‍ಯಕ್ರಮದ ಕೃತಜ್ಞತಾ ಸಭೆಯು ದೈವಸ್ಥಾನದ ವಠಾರದಲ್ಲಿ ಜರಗಿತು.


ದೈವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡರವರು ಮಾತನಾಡಿ ಎರಡು ದಿನಗಳ ಕಾಲ ನಡೆದ ಸಾರಕರೆಬೀಡು ಧರ್ಮ ನಡಾವಳಿ ಜಾತ್ರೋತ್ಸವ ಕಾರ್‍ಯಕ್ರಮ ಅತ್ಯಂತ ವ್ಯವಸ್ಥಿತವಾಗಿ, ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕಾರ್‍ಯಕ್ರಮದಲ್ಲಿ ದುಡಿದ ಸ್ವಯಂಸೇವಕರಿಗೆ, ಸಹಕಾರ ನೀಡಿದ ಊರ-ಪರವೂರ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿ, ಮುಂದೆಯೂ ತಮ್ಮ ಸಹಕಾರ ಅಗತ್ಯ ಎಂದರು. ಧರ್ಮನಡಾವಳಿ ಸಂಚಾಲಕ ದೇವಿಚರಣ್ ಶೆಟ್ಟಿ ಸಾರಕರೆಬೀಡು, ಪ್ರೀತಿ ಎಂ.ಶೆಟ್ಟಿ ಹಾಗೂ ಶ್ರದ್ಧಾ ಶೆಟ್ಟಿ, ಸಾರಕರೆಬೀಡು ಶ್ರೀ ಧರ್ಮಅರಸು ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here