ಉಪ್ಪಿನಂಗಡಿ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಮಹಾಶಿವರಾತ್ರಿ ಎರಡನೇ ಮಖೆ ಕೂಟವು ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದ ವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ದೇವಾಲಯದಲ್ಲಿ ಬುಧವಾರ ರಾತ್ರಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯಿಂದ ಭಜನಾ ಸೇವೆ, ರುದ್ರಪಾರಾಯಣ ನಡೆಯಿತು. ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆದು ಮಹಾಪೂಜೆ ನಡೆಯಿತು. ಗುರುವಾರ ಪ್ರಾತಃ ಕಾಲ ಅಸಂಖ್ಯಾ ಭಕ್ತಾದಿಗಳಿಂದ ಪವಿತ್ರ ಮಖೆ ತೀರ್ಥ ಸ್ನಾನವು ನೆರವೇರಿತು. ಬಳಿಕ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು ನಡೆದು, ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ಜಾತ್ರೋತ್ಸವದ ಅಂಗವಾಗಿ ಭಕ್ತಿ- ಭಜನ್- ಸಂಗೀತ, ಯಕ್ಷಗಾನ ಬಯಲಾಟ ನಡೆಯಿತು.

ಈ ಸಂದರ್ಭ ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ , ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ದೇವಾಲಯದ ಪ್ರಧಾನ ಅರ್ಚಕ ಕೆ. ಹರೀಶ್ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸೋಮನಾಥ, ಡಾ. ರಮ್ಯ ರಾಜಾರಾಮ್, ಅನಿತಾ ಕೇಶವ ಗೌಡ, ಬಿ. ಗೋಪಾಲಕೃಷ್ಣ ರೈ, ಜಿ. ಅರ್ತಿಲ ಕೃಷ್ಣ ರಾವ್, ದೇವಿದಾಸ್ ರೈ ಬಿ., ಎಂ. ವೆಂಕಪ್ಪ ಪೂಜಾರಿ, ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್, ಪ್ರಮುಖರಾದ ಕರುಣಾಕರ ಸುವರ್ಣ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಡಾ. ರಾಜಾರಾಮ ಕೆ.ಬಿ., ರಾಮಚಂದ್ರ ಮಣಿಯಾಣಿ, ಕೈಲಾರು ರಾಜಗೋಪಾಲ ಭಟ್, ಎನ್. ಗೋಪಾಲ ಹೆಗ್ಡೆ, ಐ. ಚಿದಾನಂದ ನಾಯಕ್, ವಿದ್ಯಾಧರ ಜೈನ್, ಸುನಿಲ್ ಅನಾವು, ತಿಮ್ಮಪ್ಪ ಗೌಡ, ಜಯಂತ ಪೊರೋಳಿ, ಗೋವಿಂದಪ್ರಸಾದ್ ಕಜೆ, ಸುಧಾಕರ ಶೆಟ್ಟಿ, ಅನುರಾಧ ಆರ್ ಶೆಟ್ಟಿ, ಸ್ವರ್ಣೇಶ್, ದೇವಾಲಯದ ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಪದ್ಮನಾಭ ಕುಲಾಲ್, ದಿವಾಕರ, ಕೃಷ್ಣಪ್ರಸಾದ್, ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.