ರಾಮಕುಂಜ: ಜೀರ್ಣೋದ್ದಾರಗೊಂಡಿರುವ ರಾಮಕುಂಜ ಗ್ರಾಮದ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಪುನ: ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಮಾ.2ರಿಂದ 7ರ ತನಕ ವೇದಮೂರ್ತಿ ಭಾರತೀರಮಣ ಆಚಾರ್ಯರ ಆಚಾರ್ಯತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಜೀರ್ಣೋದ್ದಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾ.2ರಂದು ಸಾಯಂಕಾಲ 5 ಗಂಟೆಯಿಂದ ಋತ್ವಿಜರಿಗೆ ಸ್ವಾಗತ, ಪ್ರಾರ್ಥನೆ, ಪುಣ್ಯಾಹವಾಚನ, ಸಂಕಲ್ಪ, ಆಚಾರ್ಯವರಣ, ತೋರಣ ಮುಹೂರ್ತ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ಭೂವರಾಹ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ಮಹಾಪೂಜೆ ನಡೆಯಲಿದೆ. ಮಾ.3ರಂದು ಪ್ರಾತ:ಕಾಲ ಪುಣ್ಯಾಹವಾಚನ, ನಾಂದೀ ಸಮಾರಾಧನ, ಕಂಕಣಬಂಧನ, ಅರಣಿಮಥನ, ಅಂಕುರಾರ್ಪಣ, ಗಣಪತಿ ಹೋಮ, ವಿಷ್ಣುಗಾಯತ್ರೀ ಮಂತ್ರ ಹೋಮ, ಪವಮಾನ ಹೋಮ, ಭಾಗ್ಯಕ್ಯ ಸೂಕ್ತ ಹೋಮ, ಮಹಾಪೂಜೆ, ಸಾಯಂಕಾಲ ಸುದರ್ಶನ ಹೋಮ, ಉದಕಶಾಂತಿ, ಮಹಾಪೂಜೆ ನಡೆಯಲಿದೆ.
ಮಾ.4ರಂದು ಪ್ರಾತ:ಕಾಲ ಶಾಂತಿ ಪ್ರಾಯಶ್ಚಿತ್ತ ಹೋಮ, ನವಗ್ರಹ ಹೋಮ, ಕೂಷ್ಮಾಂಡ ಹೋಮ, ಮಹಾಪೂಜೆ, ಸಾಯಂಕಾಲ ವನದುರ್ಗಾ ಮಂತ್ರಹೋಮ, ದುರ್ಗಾನಮಸ್ಕಾರ, ಮಹಾಪೂಜೆ ನಡೆಯಲಿದೆ. ಮಾ.5ರಂದು ಪ್ರಾತ:ಕಾಲ ಅದ್ಭುತ ಶಾಂತಿ, ಅಷ್ಟಮಹಾಮಂತ್ರ ಹೋಮ, ತಿಲಹೋಮ, ಮನ್ಯುಸೂಕ್ತಹೋಮ, ಮಹಾಪೂಜೆ, ಸಾಯಂಕಾಲ ದಗ್ದಶಾಂತಿ, ಚೋರಶಾಂತಿ, ಮಹಾಪೂಜೆ ನಡೆಯಲಿದೆ.
ಮಾ.6ರಂದು ಪ್ರಾತ:ಕಾಲ ಬಿಂಬ ಸಂಕೋಷ, ಅಷ್ಟಬಂಧಲೇಪನ, 11 ಗಂಟೆಯ ವೃಷಭ ಲಗ್ನದಲ್ಲಿ ಪುನ: ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಲಕ್ಷ್ಮೀಹೃದಯಮಂತ್ರ ಹೋಮ, ಮಹಾಪೂಜೆ ನಡೆಯಲಿದೆ. ಸಾಯಂಕಾಲ ಚಕ್ರಾಬ್ದ ಮಂಡಲಪೂಜೆ, ಕಲಶ ಮಂಡಲ ರಚನೆ, ಮಹಾಪೂಜೆ ನಡೆಯಲಿದೆ.
ಮಾ.7ರಂದು ಪುಣ್ಯಾಹ ವಾಚನ, ತತ್ವಕಲಶ, ಬ್ರಹ್ಮಕಲಶಾಧಿವಾಸ, ತತ್ವಹೋಮ, ಪ್ರಧಾನ ಹೋಮ, ಪುರಸ್ಸರ, ಶ್ರೀ ದೇವರಿಗೆ 11 ಗಂಟೆಯ ವೃಷಭ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಬ್ರಾಹ್ಮಣ ಸುವಾಸಿನೀ ಆರಾಧನಾ ಪುರಸ್ಸರ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಮಾ.6: ಪ್ರತಿಷ್ಟೆ, ಮಾ.7: ಬ್ರಹ್ಮಕಲಶಾಭಿಷೇಕ
ಮಾ.6ರಂದು ಬೆಳಿಗ್ಗೆ 11 ಗಂಟೆಯ ವೃಷಭ ಲಗ್ನದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಪುನ: ಪ್ರತಿಷ್ಠೆ ನಡೆಯಲಿದೆ. ಮಾ.7ರಂದು ಬೆಳಿಗ್ಗೆ 11 ಗಂಟೆಯ ವೃಷಭ ಲಗ್ನದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.