ಆಲಂಕಾರು: ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಾ.2ರಂದು ಚುನಾವಣೆ ನಡೆಯಲಿದೆ. 12 ಸ್ಥಾನಕ್ಕೆ,24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ.
ಸಾಮಾನ್ಯ ಸ್ಥಾನಕ್ಕೆ ಆಶೋಕ ಗೋಕುಲನಗರ, ಉದಯ ಸಾಲಿಯಾನ್ ಮಾಯಿಲ್ಗ, ಕೇಶವ ಗೌಡ ಆಲಡ್ಕ, ಜನಾರ್ಧನಾ ಪೂಜಾರಿ ಕದ್ರ, ದಯಾನಂದ ರೈ ಮನವಳಿಕೆ, ಪ್ರಶಾಂತ ಆರ್.ಕೆ ಕಾಜರುಕ್ಕು, ರಘುರಾಮ ಕೆ ನವಕೇವಳ, ರಮೇಶ ಯು ಉಪ್ಪಂಗಳ, ಶೇಖರ ಗೌಡ ಹಿರಿಂಜ, ಸುಭಾನು ರೈ ಮರುವಂತಿಲ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಜಯಕರ ಪೂಜಾರಿ ಕಲ್ಲೇರಿ, ವಿಜಯ ಎಸ್ ಅಂಬಾ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ದಯಾನಂದ ಎನ್ ಆಲಡ್ಕ,ಪದ್ಮಪ್ಪ ಗೌಡ ಕೆದುಂಬಾಡಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಕುಂಞ ಮುಗೇರ, ಮಾಧವ ಶಾಂತಿಗುರಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಆಶೋಕ ಪೆರಾಬೆ, ನಿರಂಜನ ಎನ್ ಏಣಿತ್ತಡ್ಕ, ಮಹಿಳಾ ಮೀಸಲು ಸ್ಥಾನದಿಂದ ಗಾಯತ್ರಿ ಚಾಮೆತ್ತಡ್ಕ, ಮೇನ್ಸಿ ಸಜನ್ ಆಗತ್ತಾಡಿ, ರತ್ನಾ ಬಿ.ಕೆ ಕೊಂಡಾಡಿಕೊಪ್ಪ, ಸುಂದರಿ ಬರೆಂಬಾಡಿ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಲೋಕೇಶ ಕಮ್ಮಿತ್ತಿಲು, ಸುದೀಶ ಪಟ್ಟೆ ಅವರು ಅಂತಿಮ ಕಣದಲ್ಲಿ ಇದ್ದಾರೆ. ನಾಳೆ ಚುನಾವಣೆ ಮುಗಿದ ಅಂತಿಮ ಬಳಿಕ ಚುನಾವಣಾ ಏಣಿಕೆ ನಡೆದು ಪಲಿತಾಂಶ ಪ್ರಕಟಗೊಳ್ಳಲಿದ್ದು, ಅಂತಿಮ ವಿಜಯದ ಮಾಲೆ ಯಾರ ಪಾಲಿಗೆ ಎಂದು ಕಾದು ನೋಡಬೇಕಾಗಿದೆ.
