ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ” ಇಂದ್ರಜಿತು “ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ಪ್ರಯುಕ್ತ ದೇವಾಲಯದ ಸಭಾಭವನದಲ್ಲಿ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯೆಯರಿಂದ ” ಇಂದ್ರಜಿತು “ಯಕ್ಷಗಾನ ತಾಳಮದ್ದಳೆ ಮಾ.1ರಂದು ಜರಗಿತು.

ಯಕ್ಷಗುರು ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ, ರಮಾನಂದ ರೈ ದೇಲಂಪಾಡಿ ಅವರ ಸಂಯೋಜನೆಯೊಂದಿಗೆ, ನಾರಾಯಣ ದೇಲಂಪಾಡಿ ಅವರ ಅರ್ಥಸಾಹಿತ್ಯ ಕೃತಿಯನ್ನೊಳಗೊಂಡ ಈ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ರಚನಾ ಚಿದ್ಗಲ್‌, ಹಾಗೂ ವಿದ್ಯಾಶ್ರೀ ,ಆಚಾರ್ಯ ಈಶ್ವರ ಮಂಗಲ ಅವರು ಹಾಡಿದರು.

ಚೆಂಡೆ ಮದ್ದಳೆ ವಾದನದಲ್ಲಿ ವಿಷ್ಣು ಶರಣ ಬನಾರಿ, ಶ್ರೀಧರ ಆಚಾರ್ಯ ಈಶ್ವರ ಮಂಗಲ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಮತ್ತು ಚಕ್ರತಾಳದಲ್ಲಿ ಮಾಷ್ಟರ್‌ ಶ್ರೀದೇವ್‌ ಆಚಾರ್ಯ ಪಾಲ್ಗೊಂಡರು.

ಅರ್ಥಧಾರಿಗಳಾಗಿ ಸರಿತಾ ರಮಾನಂದ ರೈ ದೇಲಂಪಾಡಿ, ಶೀಲಾ ಹೇಮನಾಥ ಕೇದೆಗಡಿ, ಪವಿತ್ರಾ ದಿವಾಕರ ಗೌಡ ಮುದಿಯಾರು, ಪ್ರೇಮಾ ಮನೋಹರ ಬಂದ್ಯಡ್ಕ, ಜಲಜಾಕ್ಷಿ ಸತೀಶ್‌ ರೈ ಬೆಳ್ಳಿಪ್ಪಾಡಿ, ಸುಮಲತಾ ಉದಯಕುಮಾರ್‌ ದೇಲಂಪಾಡಿ, ಸುಜಾತ ಮೋಹನದಾಸ ರೈ ದೇಲಂಪಾಡಿ, ಶಾಂತಾಕುಮಾರಿ ದೇಲಂಪಾಡಿ, ಕುಸುಮಾ ಜಯಪ್ರಕಾಶ್‌ ಕುತ್ತಿಮುಂಡ ಪ್ರಸ್ತುತ ಪಡಿಸಿದರು.


ದೇವಾಲಯದ ಆಡಳಿತ ಮಂಡಳಿಯವರು ಸ್ವಾಗತಿಸಿದರು, ಕಾರ್ಯಕ್ರಮದ ಪ್ರಾಯೋಜಕರಾದ ರಾಮನಾಯ್ಕ ದೇಲಂಪಾಡಿ ವಂದಿಸಿದರು.

LEAVE A REPLY

Please enter your comment!
Please enter your name here