ಕುಂಬ್ರ ಜಿ.ಕೆ ಕನ್ಸ್ಟ್ರಕ್ಷನ್ ಶುಭಾರಂಭ

0

ನಮ್ಮೂರು ಹೇಗಿರಬೇಕೆಂಬ ನಿರ್ಧಾರ ನಮ್ಮದು – ಸಂಜೀವ ಮಠಂದೂರು

ಅರಿಯಡ್ಕ: ಹಳ್ಳಿಗಳಲ್ಲಿ ಮೂಲ ಸೌಕರ್ಯ ಇದ್ದಾಗ ಹಳ್ಳಿಗಳು ಪರಿವರ್ತನೆ ಹೊಂದಿ ಪೇಟೆ ಪಟ್ಟಣಗಳಾಗುತ್ತವೆಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಮಾ.3 ರಂದು ಕುಂಬ್ರ ಅಕ್ಷಯ್ ಆರ್ಕೇಡ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಿ.ಕೆ ಕನ್ಸ್ಟ್ರಕ್ಷನ್ ಕಛೇರಿಯನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮೂರು ಹೇಗಿರಬೇಕೆಂಬ‌ ನಿರ್ಧಾರ ನಮ್ಮದು. ಪೇಟೆಗಳು‌ ಅಭಿವೃಧ್ಧಿ‌ ಹೊಂದಿದಾಗ ಒಂದಷ್ಟು ಜನರಿಗೆ ಉದ್ಯೋಗ ಸಿಗುತ್ತದೆ. ಜನತೆಗೆ ಹೊಸತನವನ್ನು ನೀಡುವ ಕಾರ್ಯ ನಮ್ಮಿಂದ ಆಗ ಬೇಕಿದೆ. ಈ ನಿಟ್ಟಿನಲ್ಲಿ ಕಾಸರಗೋಡಿನಿಂದ ಕುಂಬ್ರಕ್ಕೆ‌ ಬಂದು ತುಳು ಕನ್ನಡ ಮಾತಾಡುವವರ ಪ್ರೀತಿ ವಿಶ್ವಾಸ ಗೆಲ್ಲುವ ಮುಖಾಂತರ ಜನರ ಅಪೇಕ್ಷೆಯನ್ನು ಸಂಸ್ಥೆಯ ಮಾಲಕ ಸುನಿಲ್ ಕುಮಾರ್ ಈಡೇರಿಸಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ನಮ್ಮೂರಿಗೆ ಉದ್ಯೋಗ ಹರಸಿ ಬಂದವರು ಯಶಸ್ವಿಯಾಗುತ್ತಾರೆ : ಜಯಂತ ನಡುಬೈಲು

ಮುಖ್ಯ ಅತಿಥಿ ಅಕ್ಷಯ್ ಆರ್ಕೆಡ್ ಮಾಲಕ ಜಯಂತ ನಡುಬೈಲು ಸಂಸ್ಥೆಯ ನಾಮಫಲಕ ಅನಾವರಣ ಮಾಡಿ ಮಾತಾಡಿ, ಕೇರಳದಿಂದ ನಮ್ಮೂರಿಗೆ ಉದ್ಯೋಗ ಹರಸಿ ಬಂದವರು ಅನೇಕ ಜನರು ಯಶಸ್ವಿಯಾಗಿದ್ದಾರೆ. ಅವರು ಗುಣಮಟ್ಟದ ಕೆಲಸ ಮಾಡುತ್ತಾರೆ, ಸಮಯಕ್ಕೆ ಸರಿಯಾಗಿ ನೀಡಿದ ಕೆಲಸವನ್ನು ಪಾರದರ್ಶಕವಾಗಿ ಮಾಡಿ ಯಶಸ್ವಿಯಾಗಿದ್ದನ್ನು ನಾವು ಕಂಡಿದ್ದೇವೆ. ಮೂರು ಗ್ರಾಮ ಪಂಚಾಯಿತಿಗಳು ಸಂಗಮವಾಗುವ ಸ್ಥಳ ಕುಂಬ್ರ ಇಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ವರ್ತಕರ ಸಂಘವಿದೆ .ಈ ಸಂಸ್ಥೆ ಜನರಿಗೆ ಸ್ಪಂದನೆ ಕೊಡುವ ಸಂಸ್ಥೆಯಾಗಿ ಬೆಳಗಲಿ ಎಂದು ಶುಭ ಹಾರೈಸಿದರು.

ಜನರಿಗೆ ಉತ್ತಮ ಸೇವೆ ನೀಡುವ ಸಂಸ್ಥೆಯಾಗಲಿ : ತ್ರಿವೇಣಿ ಪಲ್ಲತ್ತಾರು

ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತಾಡಿ, ಊರಿನ ಪರ ಊರಿನ ಜನರಿಗೆ ಉತ್ತಮ ಸೇವೆ ನೀಡುವ ಮುಖಾಂತರ ಈ ಸಂಸ್ಥೆ ಯಶಸ್ವಿಯಾಗಲಿ ಕುಂಬ್ರ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಪೇಟೆಯಾಗಿದೆ. ಜನರ ಭಾವನೆಗೆ ತಕ್ಕಂತೆ ಪೇಟೆ ಅಭಿವೃದ್ಧಿಯಾಗುತ್ತಿದೆ .ಈ ನಿಟ್ಟಿನಲ್ಲಿ ಜಿ.ಕೆ ಕನ್ಸ್ಟ್ರಕ್ಷನ್ ಕೂಡ ಜನರ ಆಶೋತ್ತರಗಳನ್ನು ಈಡೇರಿಸುವಂತಾಗಲಿ ಎಂದು ಶುಭ ಆಶಿಸಿದರು.

ಕುಂಬ್ರ ವೇಗವಾಗಿ ಬೆಳೆಯುತ್ತಿರುವ ಪ್ರದೇಶ : ಸಂತೋಷ್ ಮಣಿಯಾಣಿ

ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಮಾತನಾಡಿ, ಕುಂಬ್ರ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಜನರ ಕುಂದು ಕೊರತೆಗಳನ್ನು ನೀಗಿಸುತ್ತಿದೆ. ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ ಬೇಕಾದ ಎಲ್ಲಾ ಅವಶ್ಯ ಸಾಮಾಗ್ರಿಗಳು ಇಲ್ಲಿ ಸಿಗುತ್ತದೆ. ಇದೊಂದು ಅಭಿವೃದ್ಧಿ ಹೊಂದುತ್ತಿರುವ ಪೇಟೆಯಾಗಿದೆ. ಜಿ.ಕೆ ಕನ್ಸ್ಟ್ರಕ್ಷನ್ ಸಂಸ್ಥೆ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿ : ಸುಜಾತ

ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಮಾತನಾಡಿ, ಜಿ.ಕೆ ಕನ್ಸ್ಟ್ರಕ್ಷನ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ, ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ವರ್ತಕರ ಸಂಘದಿಂದ ಪೂರ್ಣ ಪ್ರಮಾಣದ ಸಹಕಾರ : ಮಹಮ್ಮದ್ ಪಿ.ಕೆ

ವರ್ತಕರ ಸಂಘ ಕುಂಬ್ರ ಇದರ ಅಧ್ಯಕ್ಷ ಮಹಮ್ಮದ್ ಪಿ.ಕೆ ಮಾತಾಡಿ, ಕುಂಬ್ರದಂತಹ ಪೇಟೆಗೆ ಒಂದು ಒಳ್ಳೆಯ ಕನ್ಸ್ಟ್ರಕ್ಷನ್ ಸಂಸ್ಥೆಯ ಅವಶ್ಯಕತೆ ಇತ್ತು. ಅದು ಈ ದಿನ ಈಡೇರಿದೆ. ವರ್ತಕರ ಸಂಘದಿಂದ, ಈ ಸಂಸ್ಥೆಗೆ ಪೂರ್ಣ ಪ್ರಮಾಣದ ಸಹಕಾರವನ್ನು ನೀಡುತ್ತೇವೆ. ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಸುಕುಮಾರನ್ ಪಾಟಿ ಕೋಚ್ಚಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಎ.ಎಸ್.ಐ ಶ್ರೀಧರ ಮಣಿಯಾಣಿ ಕುತ್ಯಾಡಿ, ರಾಜೇಶ್ ರೈ ಪರ್ಪುಂಜ, ರಂಗಭೂಮಿ ಕಲಾವಿದ,ಸುಂದರ ರೈ ಮಂದಾರ, ಕುಂಬ್ರ ಅತಿಥಿ ಎಲೆಕ್ಟ್ರಾನಿಕ್ಸ್ ನ ಮಾಲಕ ಸಂಪತ್ ಕುಂಬ್ರ, ಕೇಳು ಮಣಿಯಾಣಿ ಪಾಟಿ ಕೋಚ್ಚಿ, ರಾಮ ಮಣಿಯಾಣಿ ಕುರಿಂಜ ಮೂಲೆ, ಪುಷ್ಪಾವತಿ ಕುರಿಂಜ ಮೂಲೆ, ಶಾರದಾ ಪಾಟಿ ಕೋಚ್ಚಿ, ಬಾಲಕೃಷ್ಣ ಪಟ್ಟಾಜೆ, ಉದ್ಯಮಿ ಮೇಲ್ವಿನ್ ಮೊಂತೆರೊ ಕುಂಬ್ರ, ನಾರಾಯಣ ಪೂಜಾರಿ ಕುರಿಕ್ಕಾರ, ಪದ್ಮನಾಭ ಆಚಾರ್ಯ ಶೇಖಮಲೆ, ವಾಸು ಮಣಿಯಾಣಿ ಕುರಿಂಜ ಮಣ್ಣಾಪು, ಪ್ರದೀಪ್ ಶರ್ಮಾ ಕುರಿಂಜ ಮೂಲೆ ಮತ್ತಿತರರು ಉಪಸ್ಥಿತರಿದ್ದರು.

ಸಾನ್ವಿಕ ಪ್ರಾರ್ಥಿಸಿ, ಪುರುಷೋತ್ತಮ ಮಣಿಯಾಣಿ ಕುರಿಂಜ ಮೂಲೆ ಸ್ವಾಗತಿಸಿದರು. ರವೀಂದ್ರ ಮಣಿಯಾಣಿ ದರ್ಬೆತ್ತಡ್ಕ ವಂದಿಸಿ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಮಣಿಯಾಣಿ ಕುರಿಂಜ ಮೂಲೆ ಕಾರ್ಯಕ್ರಮ ನಿರೂಪಿಸಿದರು.

ಕುಂಬ್ರದಲ್ಲಿ ಜಿ.ಕೆ ಕನ್ಸ್ಟ್ರಕ್ಷನ್ ಕಛೇರಿಯನ್ನು ಪ್ರಾರಂಭಿಸಿದ್ದೇನೆ. ಈ ಸಂಸ್ಥೆಯ ಮುಖಾಂತರ contracts, supervision, plans, 3D designs, interiors& seamless paper work, building your vision step by step. ಮಾಡಿಕೊಡಲಿದ್ದೇನೆ. ಸಾರ್ವಜನಿಕ ಬಂಧುಗಳು ಸದಾ ಪ್ರೋತ್ಸಾಹ ನೀಡಬೇಕಾಗಿ ವಿನಂತಿ.


ಸುನಿಲ್ ಕುಮಾರ್ ಪಾಟಿ ಕೊಚ್ಚಿ, ಮಾಲಕರು ಜಿ.ಕೆ ಕನ್ಸ್ಟ್ರಕ್ಷನ್, 9645641499/8848622548

LEAVE A REPLY

Please enter your comment!
Please enter your name here