





ಕಡಬ: ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡು ಮನೆಯಲ್ಲಿ ಮಾ.1 ರಂದು ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಮುಕ್ಕೂರು ಲಕ್ಷ್ಮೀಶ ಬೈಪಡಿತ್ತಾಯರ ನೇತೃತ್ವದಲ್ಲಿ ತರವಾಡು ಮನೆಯಲ್ಲಿ ಪ್ರಾತಃಕಾಲ ಗಣಹೋಮ ನಂತರ ಸ್ಥಳ ಶುದ್ಧಿ, ನಾಗ ಸಾನಿಧ್ಯಗಳಲ್ಲಿ ತಂಬಿಲ ಸೇವೆ, ಮುಡಿಪು ಪೂಜೆ ನಡೆಯಿತು.



ಅಪರಾಹ್ನ ಉಳ್ಳಾಕುಲು, ಗ್ರಾಮದೈವ ಅಬ್ಬೆಜಲಾಯ, ಧರ್ಮದೈವ ಪಿಲಿಚಾಮುಂಡಿ ಮತ್ತು ಸಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆದು ರಾತ್ರಿ ಕಲ್ಲುರ್ಟಿ, ಗುರು ಕಾರ್ನವರಿಗೆ ಅಗೇಲು ಸೇವೆ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಕುಂಜಾಡಿ ಕುಟುಂಬಸ್ಥರು, ಬಂಧುಗಳು, ಗ್ರಾಮಸ್ಥರು ಪಾಲ್ಗೊoಡರು.
















