ಕಾಣಿಯೂರು: ಕುದ್ಮಾರು ಗ್ರಾಮದ ಕೆಲಂಬೀರಿ ಶ್ರೀ ಬ್ರಹ್ಮಬೈದೆರುಗಳ ಗರಡಿಯಲ್ಲಿ 50ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವದ ಸಂದರ್ಭದಲ್ಲಿ ಸವಣೂರು ವಿದ್ಯಾರಶ್ಮೀ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರು, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಕೆ. ಸೀತಾರಾಮ ರೈ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗರಡಿಯ ಅನುವಂಶೀಯ ಮೊಕ್ತೇಸರ ಬಾಬು ಪೂಜಾರಿ ಕೆಲಂಬೀರಿ, ಸುವರ್ಣ ಮಹೋತ್ಸವ ನೇಮೋತ್ಸವ ಸಮಿತಿ ಅಧ್ಯಕ್ಷರಾದ ಉಮೇಶ್ ಕೆ.ಎನ್ ಕಾರ್ಲಾಡಿ, ಆಡಳಿತ ಸಮಿತಿ ಅಧ್ಯಕ್ಷ ಬಿ.ಎ ವಸಂತ ಪೂಜಾರಿ ಕೆಲಂಬೀರಿ, ಪ್ರಧಾನ ಕಾರ್ಯದರ್ಶಿ ಸದಾನಂದ ಸೌತೆಮಾರು, ಸುವರ್ಣ ಮಹೋತ್ಸವ ನೇಮೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ, ಉಪಾಧ್ಯಕ್ಷರಾದ ಸತೀಶ್ ಮಾರ್ಕಾಜೆ, ಜತೆ ಕಾರ್ಯದರ್ಶಿ ರಮೇಶ್ ಕೆ.ಎನ್ ಕಾರ್ಲಾಡಿ, ಕೋಶಾಧಿಕಾರಿ ಪದ್ಮನಾಭ ದೋಳ ಹಾಗೂ ಆಡಳಿತ ಮಂಡಳಿ, ಸುವರ್ಣ ಮಹೋತ್ಸವ ಸಮಿತಿ, ಕೋಟಿ ಚೆನ್ನಯ ಕರಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.