ಪುತ್ತೂರು: ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 11 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಹಾಗೂ ಭಜನಾ ಸಂಭ್ರಮ(ಅರ್ಧ ಏಕಾಹ ಹಾಗೂ ಕುಣಿತ ಭಜನೆ) ಮಾ. 25 ಮತ್ತು 26 ರಂದು ಬ್ರಹ್ಮ ಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಇದರ ಗೊನೆ ಮುಹೂರ್ತ ಮಾ. 18 ರಂದು ಜರಗಿತು. ದೇವಸ್ಥಾನದ ಪವಿತ್ರಪಾಣಿ ರತ್ನಾಕರ ಕುಂಜತ್ತಾಯರವರು ಪೂಜಾವಿಧಿವಿಧಾನವನ್ನು ನೆರವೇರಿಸಿದರು. ಅರ್ಚಕ ಪದ್ಮನಾಭ ಕುಂಜತ್ತಾಯ, ಜಾತ್ರೋತ್ಸವ ಸಮಿತಿಯ ಕಾರ್‍ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ, ಸದಸ್ಯರುಗಳಾದ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ಆಶಾ ಪ್ರವೀಣ್ ಕಂಪ, ಶಿವರಾಮ ಗೌಡ ಮೆದು, ಮೋನಪ್ಪ ಗೌಡ ಆರೇಲ್ತಡಿ, ರಾಕೇಶ್ ರೈ ಕೆಡೆಂಜಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ಗಂಗಾಧರ್ ಪೆರಿಯಡ್ಕ, ತಾ.ಪಂ, ಮಾಜಿ ಸದಸ್ಯೆ ವಿಜಯ ಈಶ್ವರ ಗೌಡ ಕಾಯರ್ಗ, ಸವಣೂರು ಗ್ರಾ.ಪಂ, ಮಾಜಿ ಸದಸ್ಯ ಪ್ರಕಾಶ್ ಕುದ್ಮನಮಜಲು, ಚಂದ್ರಶೇಖರ್ ಪಟ್ಟೆ, ಹರಿಶ್ಚಂದ್ರ ಕಾಯರ್ಗ, ಪರಮೇಶ್ವರ ಇಡ್ಯಾಡಿ, ತಿಮ್ಮಪ್ಪ ಗೌಡ ಕಾಯರ್ಗ, ನೀಲಮ್ಮ ಕಾಯರ್ಗ, ದಿವಾಕರ್ ಕಾಯರ್ಗ, ಹರೀಶ್ ಕುಕ್ಕುಜೆ, ಲತಾ ವಿದ್ಯಾಸಾಗರ್ ಪೂಂಜ ಮುಗೇರುಗುತ್ತು, ಪುಟ್ಟಣ ನಾಯ್ಕ ಅರೇಲ್ತಡಿ, ಹೊನ್ನಪ್ಪ ಗೌಡ ಕಾಯರ್ಗ, ಈಶ್ವರ ಗೌಡ ಕಾಯರ್ಗ, ಅಪ್ಪಿ ಮಡಕೆ, ಕಾಂತಪ್ಪ ಅಜಲಾಯ, ಸುಮಿತ್ರಾ ಅಚಾರ್ಯ ಕಾಯರ್ಗ, ದೀಕ್ಷಿತ್ ಭಂಡಾರಿ, ಪ್ರಥಮ್ ಕಾಯರ್ಗ, ಹೊನ್ನಪ್ಪ ಪೂಜಾರಿ ದೇವಸ್ಯ ರವರುಗಳು ಉಪಸ್ಥಿತರಿದ್ದರು.
ಮಾ.25-26 : ಮುಗೇರು ದೇವಸ್ಥಾನದ ಜಾತ್ರೋತ್ಸವ
ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಮಾ.25 ಮತ್ತು 26ರಂದು ಅದ್ದೂರಿಯಾಗಿ ನಡೆಯಲಿದೆ. ಮಾ.25 ರಂದು ಬೆಳಿಗ್ಗೆ 6.30ಕ್ಕೆ ಅರ್ಧ ಏಕಾಹ ಭಜನೆ ಪ್ರಾರಂಭವಾಗಲಿದೆ. ಬೆಳಿಗ್ಗೆ 10 ರಿಂದ ಊರ ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಸಂಜೆ ತಂತ್ರಿಗಳ ಆಗಮನದ ಬಳಿಕ ವಿವಿಧ ವೈದಿಕ ಕಾರ್‍ಯಕ್ರಮಗಳು ನಡೆಯಲಿದೆ. ಸಂಜೆ. 6.30ಕ್ಕೆ ಅರ್ಧ ಏಕಾಹ ಭಜನೆಯ ಸಮಾರೋಪ ನಡೆಯಲಿದೆ. ಸಂಜೆ 7ರಿಂದ ಕುಣಿತ ಭಜನೆ, ರಾತ್ರಿ 8ರಿಂದ ಅನ್ನಸಂತರ್ಪಣೆ ಜರಗಲಿದೆ. ಮಾ. 26 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನಾಗತಂಬಿಲ, ಪರಿವಾರ ದೈವಗಳ ಆರಾಧನೆ ಸಹಿತ ವಿವಿಧ ವೈದಿಕ ಕಾರ್‍ಯಕ್ರಮಗಳು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೫ ರಿಂದ ತ್ರಯಬಕಂ, ರಾತ್ರಿ ೮ ರಿಂದ ಶ್ರೀ ದೇವರ ಬಲಿ ಹೊರಟು, ಉತ್ಸವ, ಶ್ರೀ ಭೂತಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹಾಗೂ ಕಾರ್ಯದರ್ಶಿ ಎನ್ ಶಿವಪ್ರಸಾದ್ ಶೆಟ್ಟಿ ಕಿನಾರ ಮತ್ತು ಸಮಿತಿ ಸದಸ್ಯರುಗಳು ತಿಳಿಸಿದ್ದಾರೆ.