ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ – ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

0

ಪುತ್ತೂರು:ಪುತ್ತೂರು ಪರ್ಲಡ್ಕ ರಸ್ತೆಯ ಕಲ್ಲಿಮಾರು ಎಂಬಲ್ಲಿನ ಕಾಲುದಾರಿಯಲ್ಲಿ ಹೋಗುತ್ತಿರುವ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಯುವಕರೊಬ್ಬರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಾ.18ರ ಸಂಜೆ ನಡೆದಿದೆ.


ಇಲ್ಲಿನ ಹೊಟೇಲೊಂದರಲ್ಲಿ ಕಾರ್ಮಿಕನಾಗಿದ್ದು ದರ್ಬೆ ಪತ್ರಾವೋ ಆಸ್ಪತ್ರೆ ಬಳಿ ಬಾಡಿಗೆ ಮನೆಯಲ್ಲಿ ವಾಸವಿರುವ ಗದಗ ಮೂಲದ ಲಿಂಗಪ್ಪ ಎಂಬವರು ಕಲ್ಲಿಮಾರು ಬಳಿ ನಿಂತುಕೊಂಡು ಕಾಲುದಾರಿಯಲ್ಲಿ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.ಇದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಪುತ್ತೂರು ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ.

LEAVE A REPLY

Please enter your comment!
Please enter your name here