ಪುತ್ತೂರು: ಅರಿವು ಎಂಟರ್ಪ್ರೈಸಸ್, ಅರಿವು ಕೃಷಿ ಕೇಂದ್ರದ ಸಹಯೋಗದೊಂದಿಗೆ ಜೇನು ತರಬೇತಿ ಕಾರ್ಯಕ್ರಮವು ಮಾ.23ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12:30ರವರೆಗೆ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿರುವ ಸುದ್ದಿ ಕೃಷಿ ಸೇವಾ ಕೇಂದ್ರದಲ್ಲಿ ನಡೆಯಲಿದೆ.
ರಾಜ್ಯಮಟ್ಟದ ಜೇನು ಕೃಷಿ ತರಬೇತುದಾರ ರಾಧಾಕೃಷ್ಣ ಆರ್ ಕೋಡಿ ತರಬೇತಿ ನೀಡಲಿದ್ದಾರೆ.
ಜೇನು ಕುಟುಂಬ ಮತ್ತು ಜೇನು ಪೆಟ್ಟಿಗೆ ಬೇಕಾದಲ್ಲಿ ಮಾರ್ಚ್ 31ರ ಒಳಗೆ ಬುಕ್ಕಿಂಗ್ ಮಾಡಲಾಗುವುದು.
ಆಸಕ್ತಿ ಇರುವವರು ಈ ಕೆಳಗಿನ ನಂಬರಿಗೆ ಕರೆ ಮಾಡಿ ತಿಳಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
6364570738, 8050293990