ಪುತ್ತೂರು:ಕುಟ್ರುಪಾಡಿ ಬಡಬೆಟ್ಟು ಚಾವಡಿ ಶ್ರೀ ನಾಗ -ನಾಗಬ್ರಹ್ಮ, ಶ್ರೀ ರಾಜನ್ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನ ಇಲ್ಲಿಯ ವಾರ್ಷಿಕ ನೇಮೋತ್ಸವವು ಫೆ.28 ರಂದು ನಡೆಯಿತು.
ನೇಮೋತ್ಸವದ ಲೆಕ್ಕ ಪತ್ರ ಮಂಡನೆ ಹಾಗೂ ನೂತನ ವ್ಯವಸ್ಥಾಪನಾ ಸಮಿತಿ ರಚನೆ ಕಾರ್ಯವು ಮಾ.16 ರಂದು ದೈವಸ್ಥಾನದಲ್ಲಿ ನಡೆಯಿತು. ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಿರಣ್ ಕೊಡೆಂಕೀರಿ, ಉಪಾಧ್ಯಕ್ಷರಾಗಿ ಶಿವರಾಮ ಶೆಟ್ಟಿ ಇಂದ್ರಾಡಿ, ಕಾರ್ಯದರ್ಶಿಯಾಗಿ ಮೋಹನ ಕೆಳಗಿನ ಮನೆ, ಜತೆ ಕಾರ್ಯದರ್ಶಿಯಾಗಿ ಜಿತೇಶ್ ನಾಲೂರು, ಹಾಗೂ ಖಜಾಂಜಿಯಾಗಿ ಲಕ್ಷ್ಮೀಶ ಬಂಗೇರ ಮತ್ತು ಸದಸ್ಯರುಗಳಾಗಿ ಸುರೇಶ್ ದೋಣಿಗಂಡಿ, ನವೀನ್ ಕಾರ್ಕಳ, ರಮೇಶ್ ಕೆರೆಜಾಲು, ವಾಸುದೇವ ಎಲ್ಯ, ರಮೇಶ್ ಪೆಡ್ಡಣೆ, ಭಾಸ್ಕರ ಮರ್ವತ್ತಿಮಾರು, ಸ್ವಸ್ತಿಕ್ ಕಾರ್ಕಳ, ಧನಂಜಯ ಬರೆಮೇಲು, ರವಿಚಂದ್ರ ನಾಲೂರು, ತೀರ್ಥೇಶ್ ಕೊಡೆಂಕೀರಿ, ಪ್ರವೀಣ್ ಕೇನಡ್ಕ ಆಯ್ಕೆಯಾದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಶಶಾಂಕ್ ಗೋಖಲೆ, ಶಿವಣ್ಣ ಬಿ.ಎಚ್. ಭೀಮಗುಂಡಿ , ಚಿದಾನಂದ ಗೌಡ ಕೊಡಂಕೀರಿ, ಕೃಷ್ಣಪ್ಪ ಗೌಡ ಎಲ್ಯ, ಮೋನಪ್ಪ ಗೌಡ ಮರ್ವತ್ತಿಮಾರು, ಮೋನಪ್ಪ ಗೌಡ ಕಾರ್ಕಳ, ಸುರೇಶ್ ಗೌಡ ಪೆಡ್ಡಣೆ, ಕುಶಾಲಪ್ಪ ಗೌಡ ಕೆರೆಜಾಲು, ಕುಶಾಲಪ್ಪ ಗೌಡ ಎಲ್ಯ, ಚಿದಾನಂದ ಗೌಡ ಎಲ್ಯ, ಜನಾರ್ಧನ ಎಲ್ಯ, ಕೊರಗಪ್ಪ ಗೌಡ ಮರ್ವತಿಮಾರು, ಗೋಪಾಲ ಗೌಡ ಮರ್ವತಿಮಾರು, ಶ್ರೀಧರ ಮಠ, ರಕ್ಷಿತ್ ಮರ್ವತ್ತಿಮಾರು ಮೊದಲಾದವರು ಉಪಸ್ಥಿತರಿದ್ದರು.