ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ CET/NEET CRASH  COURSE – 2025

0

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2025ನೇ ಸಾಲಿನ CET/NEET CRASH  COURSE ತರಗತಿಗಳು ಮಾ.21ರಂದು ಪ್ರಾರಂಭಗೊಳ್ಳಲಿದೆ.

CET/NEET CRASH  COURSE ಈಗಾಗಲೇ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣಗೊಂಡ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆ ಮುಗಿಸಿ ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ತೆರೆದ ಅವಕಾಶವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಪ್ರಸ್ತುತ ಪ್ರಾರಂಭಗೊಳ್ಳುತ್ತಿರುವ ತರಗತಿಗಳನ್ನು ದಕ್ಷಿಣ ಕನ್ನಡದ ನುರಿತ ಉಪನ್ಯಾಸಕರಿಂದ ನೀಡಲಾಗುವುದು. ತರಗತಿಯಲ್ಲಿ ಕೇವಲ 40 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ.

ತರಗತಿಗಳು ಪ್ರತಿನಿತ್ಯ ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ನಡೆಯಲಿವೆ. ಪ್ರತ್ಯೇಕ ಸುಸಜ್ಜಿತವಾದ ಹಾಸ್ಟೇಲ್ ವ್ಯವಸ್ಥೆಯಿದೆ. ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ಕಛೇರಿಯನ್ನು ಸಮಯ ಬೆಳಗ್ಗೆ 9.೦೦ ರಿಂದ ಸಂಜೆ 5.೦೦ ಒಳಗಾಗಿ ಅಥವಾ ದೂರವಾಣಿ ಸಂಖ್ಯೆ 9900109490, 8123899490 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here