ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಮಕ್ಕಳು ಅಖಿಲ ನಿನಾದದ ಸವಿಯುಂಡರು. ಪರೀಕ್ಷೆ ಮುಗಿಸಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಲು ಸಂಗೀತ ವೇದಕೆಯನ್ನು ಸಜ್ಜು ಗೊಳಿಸಲಾಗಿತ್ತು. ವಿಶೇಷವಾಗಿ ಸಂಪನ್ಮೂಲ ವ್ಯಕ್ತಿಯನ್ನು ಆಹ್ವಾನಿಸಿ ಆ ಮೂಲಕ ಸಂಗೀತ ಭೂಮಿಕೆಯನ್ನು ನಿರ್ಮಿಸಲಾಗಿತ್ತು.
ಸಂಗೀತ ದೇಸಿ ಕಲೆ
ಸಂಗೀತವೊಂದು ಸಮ್ಮೋಹನ ಕಲೆ. ಅದು ಎಲ್ಲಾ ಜೀವಿಗಳಿಗೂ ಇಷ್ಟವಾಗುವ ಕಲೆ. ಸಂಗೀತವನ್ನು ಆಲಿಸಿದ ದನಗಳು ಯತೇಚ್ಛವಾಗಿ ಹಾಲು ಕೊಡುತ್ತದೆ. ಮರಗಳು ಹೂ,ಕಾಯಿ, ಹಣ್ಣು ಕೊಡುತ್ತದೆ. ಇಡೀ ಪರಿಸರವೇ ಧನಾತ್ಮಕವಾಗಿ ಇರುತ್ತದೆ. ಅಂತಹ ಅದ್ಭುತ ಶಕ್ತಿ ಇರುವ ಸಂಗೀತ ಆರಾದನಾ ಕಲೆಯೂ ಆಗಿದೆ. ಮಕ್ಕಳಿಗಂತೂ ಜೋಗುಳದಿಂದ ಹಿಡಿದು,ಪ್ರತಿ ಹಂತದಲ್ಲೂ ಹಾಡು ಉತ್ತೇಜನ ನೀಡುತ್ತದೆ. ಇಂದು ಸಂಗೀತದಲೆಯಲ್ಲಿ ತೇಲಲು ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಸಂಗೀತ ಸಾಧಕಿ ಅಖಿಲಾ ನೆಕ್ರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕಾರ್ಯಕ್ರಮವನ್ನು ಯಶಸ್ವಗೊಳಿಸಿದ್ದಾರೆ.
ಅಖಿಲಾ ನೆಕ್ರಾಜೆ ರವರನ್ನು ಸಂಸ್ಥೆಯ ಮುಖ್ಯಗುರು ತಾರಾನಾಥ ಸವಣೂರು ಶಾಲು ಹೊದಿಸಿ ಗೌರವಿಸಿದರು. ಶಿಕ್ಷಕರಾದ ಹರಿಣಾಕ್ಷಿ ಎಂ ಶೋಭಾ,ಶ್ರೀಲತಾ,ಕವಿತಾ, ಶಿಲ್ಪರಾಣಿ ಸೌಮ್ಯ,ಹೇಮಾವತಿ, ಮಧುಶ್ರೀ,ಸುಮಿತ್ರಾ ಸಂಚನಾ, ಸವಿತಾ ಚಂದ್ರಾವತಿ ಸಹಕರಿಸಿದರು.