ಪುತ್ತೂರು: ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಪುತ್ತೂರು ನಗರ ಯೋಜನಾ ಪ್ರಾಧಿಕಾರ ಕಚೇರಿಗೆ ಭೇಟಿ ನೀಡಿ ಸುಳ್ಯ ತಾಲೂಕು 9/11 ಕಡತಗಳ ಬಗ್ಗೆ ಚರ್ಚೆ ನಡೆಸಿದರು.
ಪೂಡ ಅಧ್ಯಕ್ಷ ಅಮಲ ರಾಮಚಂದ್ರ ನೂತನವಾಗಿ ಪ್ರಾಧಿಕಾರ ರಚನೆಗೊಂಡು ಪ್ರಥಮ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡ ಕೆ. ಎಂ. ಮುಸ್ತಫರನ್ನು ಅಭಿನಂದಿಸಿದರು. ಈ ಸಂದರ್ಬದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಎಂ. ಶಾಹಿದ್, ಪೆರುವಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಚಿನ್ ರಾಜ್ ಶೆಟ್ಟಿ ಜೊತೆಯಲ್ಲಿದ್ದರು.
ಸಮಾಲೋಚನಾ ಸಭೆಯಲ್ಲಿ ಈ ವರೆಗೆ ಸುಳ್ಯ ತಾಲೂಕು ಗ್ರಾಮಾಂತರ 9/11 ಅರ್ಜಿಗಳು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಸ್ವೀಕರಿಸಿದ ಅರ್ಜಿಗಳು ಪುಡಾ ದಲ್ಲಿ ವಿಲೇವಾರಿ ಮಾಡುವಂತೆ ಸರ್ಕಾರದ ಆದೇಶವಿದೆ. ಇದೀಗ ಸುಳ್ಯದಲ್ಲಿ ಪ್ರತ್ಯೇಕವಾಗಿ ಪ್ರಾಧಿಕಾರ ರಚನೆಗೊಂಡು ಶೀಘ್ರದಲ್ಲೇ ಕಚೇರಿ ಕಾರ್ಯಾರಂಭವಾಗಲಿದ್ದು, ಸದ್ರಿ ಅರ್ಜಿಗಳನ್ನು ಸುಳ್ಯ ದಲ್ಲಿ ಇತ್ಯರ್ಥಗೊಳಿಸಲು ಅನುಕೂಲವಾಗುವಂತೆ ಕಡತಗಳನ್ನು ವರ್ಗಾಯಿಸಲು ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ತಿಳಿಸಿದರು.
ಪುಡಾ ಸಹಾಯಕ ನಿರ್ದೇಶಕ ಇಂಜಿನಿಯರ್ ಗುರುಪ್ರಸಾದ್, ಪುಡಾ ಸದಸ್ಯರಾದ ನಿಹಾಲ್. ಪಿ. ಶೆಟ್ಟಿ, ಅನ್ವರ್ ಸಾದಾತ್,ಟೌನ್ ಪ್ಲಾನರ್ ಅಷ್ಪಕ್ ಮೊದಲಾದವರು ಉಪಸ್ಥಿತರಿದ್ದರು.