ಪುತ್ತೂರು: ಪುತ್ತೂರು ಉಪತಹಶೀಲ್ದಾರ್ ಸುಲೋಚನಾ ಪಿ ಕೆ ಅವರ ‘ಸತ್ಯದರ್ಶನ’ ಪುಸ್ತಕವು 2023ನೇ ಸಾಲಿನ ‘ಜಿ.ಪಿ. ರಾಜರತ್ನಂ ಸಂಸ್ಕರಣ ದತ್ತಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದು. ಮಾ.21ರಂದು ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
2023 ಜನವರಿಯಿಂದ 2023 ಡಿಸೆಂಬರ್ ತನಕ ಪ್ರಕಟವಾದ ವಿವಿಧ ಕೃತಿಗಳನ್ನು ಒಟ್ಟು 52 ದತ್ತಿಗಳ 57 ಪ್ರಶಸ್ತಿಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು. 2024ನೇ ಸೆಪ್ಟೆಂಬರ್ 25 ಮತ್ತು 26ರಂದು ಮಾನ್ಯ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಎರಡೂ ದಿನಗಳು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ವಿಷಯ ತಜ್ಞರನ್ನೊಳಗೊಂಡ ಸಮಿತಿಯು 2023ನೇ ಸಾಲಿನ – ವಿವಿಧ ದತ್ತಿ ಪ್ರಶಸ್ತಿಗೆ ಪುಸ್ತಕಗಳನ್ನು ಆಯ್ಕೆ ಮಾಡಿದ್ದು ಇದರಲ್ಲಿ ಸುಲೋಚನಾ ಅವರ ‘ಸತ್ಯದರ್ಶನ’ ಪುಸ್ತಕವು ‘ಜಿ.ಪಿ. ರಾಜರತ್ನಂ ಸಂಸ್ಕರಣ ದತ್ತಿ’ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಮಾ.21ರಂದು ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ’ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
Home ಇತ್ತೀಚಿನ ಸುದ್ದಿಗಳು ಪುತ್ತೂರು ಉಪತಹಶೀಲ್ದಾರ್ ಸುಲೋಚನಾ ಅವರ ಸತ್ಯದರ್ಶನ’ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ