





ಪುತ್ತೂರು: ಬನ್ನೂರಿನ ಕೃಷ್ಣ ನಗರದಲ್ಲಿರುವ ಎ.ವಿ.ಜಿ. ಆಂಗ್ಲ ಮಾಧ್ಯಮ ಶಾಲೆಯ ನೂತನ ಆಡಳಿತ ಅಧಿಕಾರಿಯಾಗಿ ನಿವೃತ್ತ ಶಿಕ್ಷಕ, ಜೇಸಿ ತರಬೇತುದಾರ ಗುಡ್ಡಪ್ಪ ಗೌಡ ಬಲ್ಯ ಅವರು ಅಧಿಕಾರ ಸ್ವೀಕರಿಸಿದರು. ಸುಮಾರು 35 ವರ್ಷಗಳ ಬೋಧನ ಅನುಭವ ಇರುವ ಇವರು ಈ ಶಾಲೆಯ ಆರಂಭದಿಂದಲೇ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆಯವರು ದಾಖಲೆ ಪತ್ರವನ್ನು ಗುಡ್ಡಪ್ಪ ಬಲ್ಯ ಅವರಿಗೆ ಹಸ್ತಾಂತರಿಸಿ ಆಡಳಿತಾಧಿಕಾರಿಯಾಗಿ ಘೋಷಿಸಿದರು. ಸಂಸ್ಥೆಯ ನಿರ್ದೇಶಕರಾದ ಗೌರಿ ಬನ್ನೂರು, ಗಂಗಾಧರ ಗೌಡ ಎ.ವಿ. ಪ್ರಾಂಶುಪಾಲ ಸವಿತಾ ಕುಮಾರಿ, ಕಚೇರಿ ಸಿಬ್ಬಂದಿ ವನಿತಾ ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ ಸ್ವಾಗತಿಸಿ, ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತಾಧಿಕಾರಿಯವರ ಪಾತ್ರದ ಕುರಿತು ತಿಳಿಸಿ ಶುಭ ಹಾರೈಸಿದರು. ಉಪಾಧ್ಯಕ್ಷ ಉಮೇಶ್ ಗೌಡ ಮಳುವೇಲು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.











