ಸವಣೂರು: ವಿದ್ಯುತ್ ಕಳ್ಳತನ -ತಾಜುದ್ದೀಮ್ ವಿರುದ್ಧ ಪ್ರಕರಣ ದಾಖಲು

0

ವಿದ್ಯುತ್ ಕಂಬ ಅಳವಡಿಸಿ ಅನಧಿಕೃತವಾಗಿ ಸಂಪರ್ಕ ಪತ್ತೆ

ಸವಣೂರು: ಕಡಬ ತಾಲೂಕು ಸವಣೂರು ಗ್ರಾಮದ ಕಣಿಮಜಲು ಎಂಬಲ್ಲಿರುವ ಅಬ್ದುಲ್ ಆಸೀಫ್ ರೆಂಜಾಲಾಡಿ ಎಂಬವರ ತೋಟದಲ್ಲಿ ವಿದ್ಯುತ್ ಕಳ್ಳತನ ಮಾಡಿರುವುದನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ಮೆಸ್ಕಾಂ ಜಾಗೃತದಳ ಸಿಬ್ಬಂದಿಗಳಿಂದ ಪತ್ತೆ ಹಚ್ಚಿದ್ದಾರೆ.

ವಿದ್ಯುತ್ ಕಂಬ ಅಳವಡಿಸಿ ಅನಧಿಕೃತವಾಗಿ ಸಂಪರ್ಕ ನೀಡಿದ ಗುತ್ತಿಗೆದಾರ ಬ್ರೈಟ್ ಪವರ್ ಪ್ಲಸ್ ತಾಜುದ್ದಿನ್ ಕೂರತ್ ಹಾಗೂ ಅಬ್ದುಲ್ ಆಸೀಫ್ ರೆಂಜಲಾಡಿಯವರ ಮೇಲೆ ಪ್ರಕರಣ ದಾಖಲಾಗಿದೆ. ಬೆಳಂದೂರಿನಲ್ಲಿಯೂ ಇದೇ ರೀತಿಯ ಪ್ರಕರಣ ದಾಖಲಾಗಿದ್ದು, ತಾಜುದ್ದೀನ್ ಅವರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here