ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯು ಹಲವಾರು ವರ್ಷಗಳಿಂದ NMMS ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿಕೊಂಡು ಬಂದಿರುವ ವಿದ್ಯಾಸಂಸ್ಥೆಯಾಗಿದೆ.
ಪ್ರಸ್ತುತ ವರ್ಷದ NMMS ಪರೀಕ್ಷೆಯಲ್ಲಿ 8ನೇ ತರಗತಿಯ ಭವಿಷ್ಯ (ಲಿಂಗಪ್ಪ ಗೌಡ-ಲೀಲಾವತಿ ದಂಪತಿ ಪುತ್ರಿ) ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ಪುತ್ತೂರು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಪ್ರಜ್ಞಾ (ಕೆ.ನವೀನ-ಬಿ.ಸುಮತಿ ದಂಪತಿ ಪುತ್ರಿ) ಜಿಲ್ಲಾ ಮಟ್ಟದಲ್ಲಿ 4ನೇ ಸ್ಥಾನ ಹಾಗೂ ತಾಲೂಕು ಮಟ್ಟದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಸಿಂಚನ(ದಿನೇಶ್ ಭಂಡಾರಿ- ಸುಲೋಚನಾ ದಂಪತಿ ಪುತ್ರಿ) ಜಿಲ್ಲಾ ಮಟ್ಟದಲ್ಲಿ 5ನೇ ಸ್ಥಾನ ಹಾಗೂ ತಾಲೂಕು ಮಟ್ಟದಲ್ಲಿ 3ನೇ ಸ್ಥಾನ, ಪ್ರಣಮ್ಯ ಹೆಚ್.ಕೆ(ಕೃಷ್ಣಪ್ರಸಾದ್ ಹೆಚ್.-ಸುಮನಾಪ್ರಸಾದ್ ದಂಪತಿ ಪುತ್ರಿ)ಜಿಲ್ಲಾ ಮಟ್ಟದಲ್ಲಿ 6ನೇ ಸ್ಥಾನ ಹಾಗೂ ತಾಲೂಕು ಮಟ್ಟದಲ್ಲಿ 4ನೇ ಸ್ಥಾನ, ಎಂ.ಶಮಂತ್ ಕುಮಾರ್(ಎಂ.ಶಿವರಾಮ್ ಆಚಾರ್ಯ-ಮಮತಾ ಎಸ್.ಆಚಾರ್ಯ ದಂಪತಿ ಪುತ್ರ) ಜಿಲ್ಲಾ ಮಟ್ಟದಲ್ಲಿ 9ನೇ ಸ್ಥಾನ ಹಾಗೂ ತಾಲೂಕು ಮಟ್ಟದಲ್ಲಿ 6ನೇ ಸ್ಥಾನ ಪಡೆದಿರುತ್ತಾರೆ. ಶಾಲೆಯಿಂದ ಪರೀಕ್ಷೆಗೆ ಹಾಜರಾದ ಹಲವು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಗುರು ಸತೀಶ್ ಭಟ್ ಹಾಗೂ ಶಿಕ್ಷಕ ವೃಂದದವರು ತರಬೇತಿ ನೀಡಿದ್ದರು. ಪೋಷಕರು ಮತ್ತು ಆಡಳಿತ ಮಂಡಳಿ ಸಹಕರಿಸಿದ್ದರು.
ಶೈಕ್ಷಣಿಕ ವರ್ಷದ ವಿಶೇಷ ಸಾಧನೆ
*ಜಿಲ್ಲೆಯ ಮೊದಲ 10 ಸ್ಥಾನದಲ್ಲಿ 5 ಸ್ಥಾನಗಳು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳದ್ದು.
*ದ.ಕ.ಜಿಲ್ಲೆಯಲ್ಲಿ 100 ಕ್ಕಿಂತ ಹೆಚ್ಚು ಅಂಕ 56 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು.
*ಪುತ್ತೂರು ತಾಲೂಕಿನ ಮೊದಲ 10 ವಿದ್ಯಾರ್ಥಿಗಳಲ್ಲಿ ಎಂಟು ವಿದ್ಯಾರ್ಥಿಗಳು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.