ಕೆಯ್ಯೂರು: ಕೆಯ್ಯೂರು ಗ್ರಾಮದ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವವು ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆದು, ಮಾ.26ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಶ್ರೀ ದೇವರ ಬಲಿ ಹೊರಟು ಶ್ರೀ ಭೂತ ಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ಬಳಿಕ “ಕೆಯ್ಯೂರು ಬೇಡಿ” ಎಂದೇ ಪ್ರಸಿದ್ಧಿ ಪಡೆದು ಕೊಂಡಿರುವ ಸುಡುಮದ್ದು ಪ್ರದರ್ಶನ ನಡೆಯಿತು.


ಮಾ.27ರಂದು ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು,ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ,ಮಹಾಪೂಜೆ, ವೈಧಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಸಾವಿರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ಸದಸ್ಯರಾದ ಜಲಜಾಕ್ಷಿ ಎ.ರೈ ಸಾಗು, ಸುಜಯ ಕೆಯ್ಯೂರು, ಉಮಾಕಾಂತ್ ಬೈಲಾಡಿ, ಅಶೋಕ್ ರೈ ದೇರ್ಲ, ಕೆ.ಎಸ್ ಚಂದ್ರಶೇಖರ ಪೂಜಾರಿ ಕಣಿಯಾರು, ದಾಮೋದರ ಪೂಜಾರಿ ಕೆಂಗುಡೇಲು, ಹರಿನಾಥ ನಾಯ್ಕ ಇಳಂತಾಜೆ, ಸಂದರ್ಭದಲ್ಲಿ ದೇವಲಯದ ಮಾಜಿ ಆಡಳಿತ ಮೊಕ್ತೇಶರಾದ ಶಶಿಧರ ರಾವ್ ಬೊಳಿಕಲ, ಎಸ್.ಬಿ.ಜಯರಾಮ ರೈ ಬಳಜ್ಜ, ಚೆನ್ನಪ್ಪ ರೈ ದೇರ್ಲ, ಸದಸ್ಯರುಗಳು, ಜಾತ್ರೋತ್ಸವದ ಉಪ ಸಮಿತಿಗಳ ಸಂಚಾಲಕರಾದ, ಆಹಾರ ಸಮಿತಿ ಸಂಚಾಲಕ ಜಯಂತ ಪೂಜಾರಿ ಕೆಂಗುಡೇಲು ಮತ್ತು ಸದಸ್ಯರು, ಚಪ್ಪರ ಸಮಿತಿ ಸಂಚಾಲಕ ಬೇಬಿ ಪೂಜಾರಿ ದೇರ್ಲ ಮತ್ತು ಸದಸ್ಯರು, ಆಮಂತ್ರಣ ವಿತರಣಾ ಸಮಿತಿ ಸಂಚಾಲಕ ದೇವಣ್ಣ ನಾಯ್ಕ ಮತ್ತು ಸದಸ್ಯರು, ವೈದಿಕ ಸಮಿತಿ ಸಂಚಾಲಕ ರಾಮಕೃಷ್ಣ ಭಟ್ ಮೇರ್ಲ ಮತ್ತು ಸದಸ್ಯರು, ಸ್ವಚ್ಛತಾ ಸಮಿತಿ ಸಂಚಾಲಕ ಆನಂದ ರೈ ದೇವಿ ನಗರ ಮತ್ತು ಸದಸ್ಯರು,ಅಲಂಕಾರ ಸಮಿತಿ ಪ್ರವೀಣ್ ಕಟ್ಟತ್ತಾರು ಮತ್ತು ಸದಸ್ಯರು, ವಾಹನ ನಿಲುಗಡೆ ಸಮಿತಿ ಸಂಚಾಲಕ ಆದರ್ಶ್ ರೈ ಕೆಯ್ಯೂರು ಮತ್ತು ಸದಸ್ಯರು, ಅರ್ಚಕ ವೃಂದ, ನೌಕರ ವೃಂದ, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರ ಸದಸ್ಯರುಗಳು, ಸಹಕರಿಸುವ ಸಂಘ ಸಂಸ್ಥೆಗಳು, ಗ್ರಾಮಸ್ಥರು, ಭಕ್ತಾಧಿಗಳು ಉಪಸ್ಥಿತರಿದ್ದರು.




ಮಾ:28ರಂದು ಬೆಳಿಗ್ಗೆ ಉಳ್ಳಾಕುಲು ನೇಮ, ವರ್ಣರ ಪಂಜುರ್ಲಿ, ಶ್ರೀ ರಕ್ತೇಶ್ವರಿ, ಪಿಲಿಚಾಮುಂಡಿ ನೇಮ ನಡೆದು, ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ಕುಪ್ಪೆಪಂಜುರ್ಲಿ, ಗುಳಿಗ ದೈವದ ನೇಮ ನಡೆದು ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.