ಪುತ್ತೂರು: ಕೋವಿಡ್ ನಂತರ ಯುವಜನತೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಅದರಂತೆ ಸ್ವ ಉದ್ಯೋಗ ಮತ್ತು ಕೃಷಿಯತ್ತ ಮುಖ ಮಾಡಿದ್ದಾರೆ.ಅಂತವರಿಗಾಗಿ ಅರಿವು ಕೃಷಿ ಕೇಂದ್ರವು ಅಣಬೆ ಕೃಷಿ ತರಬೇತಿಯನ್ನು ಆಯೋಜಿಸಿದೆ.
ಮಾ.30 ರಂದು ಬೆಳಗ್ಗೆ 10 ಗಂಟೆಗೆ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಕಾಂಪ್ಲೆಕ್ಸ್ನಲ್ಲಿರುವ ಅರಿವು ಕೃಷಿ ಕೇಂದ್ರದಲ್ಲಿ ಅಣಬೆ ಕೃಷಿ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಗಿರೀಶ್ವರ ಭಟ್ ಅವರು ಒಟ್ಟು ಎರಡು ಗಂಟೆಗಳ ಕಾಲ ತರಬೇತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅರಿವು ಕೃಷಿ ಕೇಂದ್ರ 6364570738, 8050293990 ಸಂಪರ್ಕಿಸಬಹುದು. ಅಲ್ಲದೆ, ಈಗಾಗಲೇ ಅಣಬೆ ಕೃಷಿಯಲ್ಲಿ ತೊಡಗಿರುವವರಿಗೆ ಅಣಬೆ ಬೀಜಗಳು ಬೇಕಾದಲ್ಲಿ ಇದೇ ನಂಬರ್ ಗೆ ಕರೆ ಮಾಡಿ ಬುಕ್ಕಿಂಗ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.