ಕಡಬ: ಸ.ಹಿ.ಪ್ರಾ.ಶಾಲೆ ಬೈಲು ಬಿಳಿನೆಲೆ ಶಾಲೆಯ ಶಿಕ್ಷಕಿ, ಚೇರು ಕಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ದಮಯಂತಿ ಜಿ. ಅವರು ಮಾ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ದಮಯಂತಿ ಜಿ. ಇವರು ಕಿ.ಪ್ರಾ.ಶಾಲೆ ಕೇಮನಬಳ್ಳಿ ಜಾಲ್ಸೂರು, ಹಿ.ಪ್ರಾ.ಶಾಲೆ ಚಾರ್ವಾಕ, ಬಾಳಿಲ ವಿದ್ಯಾಭೋದಿನಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು ಉಡುಪಿ ಕೊಕ್ಕರ್ಣೆಯ ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದು 2014ರ ಸೇವಾವಧಿಯಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. 1989ರಿಂದ 1994ರವರೆಗೆ ವಿದ್ಯಾಬೋದಿನಿ ಹಿ.ಪ್ರಾ.ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. 1994ರಲ್ಲಿ ಸೂರಂಬೈಲು ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ನೇಮಕಗೊಂಡರು. 1997ರಿಂದ ಸರಕಾರಿ ಹಿ.ಪ್ರಾ.ಶಾಲೆ ಪುತ್ತಿಲ ಬೈಲಡ್ಕ,2009ರಿಂದ ಸ.ಹಿ.ಪ್ರಾ.ಶಾಲೆ ಬೈಲು ಬಿಳಿನೆಲೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿಯೋಜನೆ ಮೇರೆಗೆ ಮುಖ್ಯ ಶಿಕ್ಷಕಿಯಾಗಿ ಶಿಕ್ಷಕರ ಕೊರತೆ ಇರುವ ಚೇರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಸುಮಾರು 30 ವರ್ಷ ಆರು ತಿಂಗಳು ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇ
ವರು ಪತಿ ನಿವೃತ್ತ ಆರೋಗ್ಯ ಇಲಾಖೆಯ ಎಪ್.ಡಿ.ಎ. ಕೊರಗಪ್ಪ ಗೌಡ ಒಗ್ಗು ಇವರೊಂದಿಗೆ ವಾಸವಾಗಿದ್ದು ಮಗ ಕೀರ್ತನ್ ಕೆ.ವಿ, ಮಗಳು ಶಿಲ್ಪಾ ಕೆ.ವಿ. ಸೊಸೆ ದೀಪಿಕಾ ಇವರು ಉದ್ಯೋಗದಲ್ಲಿದ್ದಾರೆ.