ಪುತ್ತೂರು: ಜಿಲ್ಲಾ ಯಾದವ ಸಮ್ಮೇಳನದ ಪ್ರಯುಕ್ತ ನಡೆಯುವ ಜಿಲ್ಲಾ ಕ್ರೀಡಾಕೂಟಕ್ಕೆ ಯಾದವ ಸಭಾ ತಾಲೂಕು ಸಮಿತಿ ಇದರ ಟೀಮ್ ಯಾದವ ಪುತ್ತೂರು ಇದರ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಹಾಗೂ ಪವನ್ ಯಾದವ್ ದೇವಸ್ಯ ಟೀ ಶರ್ಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯಾದವ ಸಭಾ ಕೇಂದ್ರ ಸಮಿತಿ ಹಾಗೂ ಪುತ್ತೂರು ತಾಲೂಕು ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಸ್ವಾಗತಿಸಿ ವಂದಿಸಿದರು.