ಮಧೂರು ಬ್ರಹ್ಮಕಲಶೋತ್ಸವಕ್ಕೆ ಬ್ರಹ್ಮ ಮೊಗೇರ ಆರಾಧನಾ ಟ್ರಸ್ಟ್ ನಿಂದ ಹೊರೆ ಕಾಣಿಕೆ

0

ಪುತ್ತೂರು : ಶ್ರೀ ಮಧೂರು ದೇವಾಲಯ ಸಮಸ್ತ ಮೊಗೇರ ಹೊರೆಕಾಣಿಕೆ ಸಮಿತಿ ಕಾಸರಗೋಡು ಇವರ ಮಾರ್ಗದರ್ಶನದಲ್ಲಿ ಪುತ್ತೂರು ಬ್ರಹ್ಮ ಮೊಗೇರ ಆರಾಧನಾ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಸಮಸ್ತ ಮೊಗೇರ ಬಾಂಧವರ ಪರವಾಗಿ ಇತಿಹಾಸ ಪ್ರಸಿದ್ಧ ಕಾಸರಗೋಡು ಮಧೂರು ಶ್ರೀ ಮದನಂತೆಶ್ವರ ಸಿದ್ಧಿವಿನಾಯಕ ಕ್ಷೇತ್ರ ಮಧೂರಿನಲ್ಲಿ ಮಾ. 27 ರಿಂದ ಏಪ್ರಿಲ್ 7 ರ ತನಕ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಪುತ್ತೂರು ಬ್ರಹ್ಮ ಮೊಗೇರ ಸಮಾಜ ಭಾಂದವರಿಂದ ಶ್ರೀ ಕ್ಷೇತ್ರಕ್ಕೆ ಹೊರೆ ಕಾಣಿಕೆ ಸಮರ್ಪಣೆ ಕಾರ್ಯಕ್ಕೆ ಏ.1 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.

ಶ್ರೀ ದೇವರ ಸನ್ನಿಧಿಯಲ್ಲಿ ಪೂಜೆಯನ್ನು ನೆರವೇರಿಸಿದ ಬಳಿಕ ದೇವಾಲಯದ ಮುಂಭಾಗದಿಂದ ಮೆರವಣಿಗೆ ಹೊರಟಿತು. ಅಧ್ಯಕ್ಷ ಗಣೇಶ್ ಸಂಪ್ಯ, ಉಪಾಧ್ಯಕ್ಷ ಲೋಕೇಶ್ ಎಂ ಎಚ್. ಹಿರೇಬಂಡಾಡಿ , ಪ್ರದಾನ ಕಾರ್ಯದರ್ಶಿ ಪ್ರಶಾಂತ್ ತ್ಯಾಗರಾಜ ನಗರ, ಗೌರವಾಧ್ಯಕ್ಷರಾದ ನವೀನ್ ಸಾಮೆತತಡ್ಕ, ಸಂಚಾಲಕ ಪರಮೇಶ್ವರ ಕುಡ್ಕೋಳಿ ಸಹಿತ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here