ಎ.7ರಿಂದ ಐಕ್ಯಂ ಅಕಾಡೆಮಿಯಿಂದ ಆರ್ಟ್ ಆಂಡ್ ಕ್ರಾಫ್ಟ್ ಬೇಸಿಗೆ ಶಿಬಿರ

0

ಪುತ್ತೂರು: ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಬೇಸಿಗೆ ರಜೆ ವ್ಯರ್ಥ ಮಾಡುವ ಬದಲು ಜೀವನಕ್ಕೆ ಉಪಯೋಗವಾಗುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಕೆಲವೊಂದು ಸಂಘ ಸಂಸ್ಥೆಗಳು ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಿವೆ. ಈ ಪೈಕಿ ಐಕ್ಯಂ ಅಕಾಡೆಮಿ ಆಫ್ ಆರ್ಟ್ಸ್ ಕೂಡ ಒಂದು.


ಪುತ್ತೂರಿನ ತೆಂಕಿಲದಲ್ಲಿರುವ (ಬೈಪಾಸ್ ರೋಡ್) ಎಂಆರ್‌ಪಿಎಲ್ ಪೆಟ್ರೋಲ್ ಪಂಪ್ ಮುಂಭಾಗದಲ್ಲಿರುವ ಐಕ್ಯಂ ಅಕಾಡೆಮಿಯಲ್ಲಿ ಏ.7 ರಿಂದ ಆರ್ಟ್ ಆಂಡ್ ಕ್ರಾಫ್ಟ್ ಎಂಬ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಈ ಶಿಬಿರದಲ್ಲಿ ಮಾಸ್ಕ್ ತಯಾರಿ, ಗ್ಲಾಸ್ ಪೈಂಟಿಂಗ್, ಕೀ ಚೈನ್, ಫ್ರಿಡ್ಜ್ ಮ್ಯಾಗ್ನೇಟ್, ಕ್ಲೇ ಆರ್ಟ್ ಮತ್ತು ಮರಳು ಕಲೆ, ಮಣ್ಣಿನ ಕಲೆ ಮಾಡುವುದನ್ನು ಕಲಿಸಿಕೊಡಲಾಗುತ್ತಿದೆ. ಬೇಕಾದ ಅಗತ್ಯ ಸೌಕರ್ಯಗಳನ್ನೂ ಅಲ್ಲೇ ನೀಡಲಾಗುತ್ತದೆ.


ಏ. 12ರ ವರೆಗೆ ನಡೆಯಲಿರುವ ಈ ಶಿಬಿರವು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿದ್ದು, ಆಸಕ್ತರು ತಮ್ಮ‌ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9481961297 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here