ಕಾವು: ಸಾಲ ವಸೂಲಾತಿಯಲ್ಲಿ ಅನೇಕ ಬಾರಿ ಶೇ.100 ಸಾಧನೆ ಮಾಡಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಬಾರಿಯೂ ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ತಿಳಿಸಿದ್ದಾರೆ.

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಆರ್ಥಿಕ ವರ್ಷಾಂತ್ಯಕ್ಕೆ ಅತ್ಯುತ್ತಮ ವ್ಯವಹಾರದೊಂದಿಗೆ ಎಲ್ಲಾ ವಿಭಾಗದಲ್ಲೂ ಪ್ರಗತಿಯನ್ನು ಸಾಧಿಸಿ ಉತ್ತಮ ಲಾಭವನ್ನು ಗಳಿಸಿ, ಪ್ರಮುಖವಾಗಿ ಸಾಲ ಮರುಪಾವತಿಯಲ್ಲಿ ಶೇ.100 ಸಾಧನೆಯನ್ನು ಮಾಡಲಾಗಿದೆ. ಸಂಘವು ಕಳೆದ ಹಲವು ವರ್ಷಗಳಿಂದ ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆಯನ್ನು ಮಾಡುತ್ತಿದ್ದು, ಸಂಘದ ಸರ್ವತೋಮುಖ ಪ್ರಗತಿ, ಅಭಿವೃದ್ಧಿ, ಸಾಧನೆಗೆ ಸಹಕರಿಸಿದ ಸಂಘದ ಸದಸ್ಯರುಗಳಿಗೆ, ಗ್ರಾಹಕರಿಗೆ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಆಡಳಿತ ಮಂಡಳಿ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುವುದಾಗಿ ನನ್ಯ ಅಚ್ಚುತ ಮೂಡೆತ್ತಾಯರವರು ತಿಳಿಸಿದ್ದಾರೆ.