ಪುತ್ತೂರು: ಪುತ್ತೂರು ಸಿಟಿ ಗುಡ್ಡೆ ಶ್ರೀಕೃಷ್ಣ ಯುವಕ ಮಂಡಲ ಮತ್ತು ಆಶಾಬೆಳಕು ಬಡವರ ಸೇವಾ ಟ್ರಸ್ಟ್(ರಿ) ಆರ್ಲಪದವು ಪಾಣಾಜೆ ಇವರ ಮನೆಮನೆಗೆ ಹೋಗಿ ಪ್ರತಿಭೆಗಳ ಪ್ರೋತ್ಸಾಹಿಸುವ ಕಾರ್ಯಕ್ರಮದ 130ನೇ ಬಾಲಪ್ರತಿಭೆಯಾಗಿ,ಮಾಡಾವಿನ ಪ್ರಶಾಂತ್ ರೈ ಮತ್ತು ಕವಿತಾ ರೈ ದಂಪತಿಯ ಪುತ್ರಿ ಬೇಬಿ ಪ್ರಶ್ವಿ ಶೆಟ್ಟಿ ಮಾಡಾವು ಅವರ ಕಲಿಕೆ, ಭಾಷಣ, ಅಭಿನಯ ಗೀತೆ, ಸಂಗೀತ, ಯಕ್ಷ ನೃತ್ಯ, ಕ್ರೀಡೆಯಲ್ಲಿ ಮೂರನೇ ವಯಸ್ಸಿನಿಂದಲೇ ಮಾಡಿದ ಎಳೆಯ ಪ್ರತಿಭೆ ಸಾಧನೆಗಳ ಗುರುತಿಸಿ ಮಾಡಾವಿನ ಮನೆಯಲ್ಲಿ ʼಕಲಾ ಮಾಣಿಕ್ಯʼ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ರಾಜೀವ ಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಲಲಿತಾ ರೈ, ಕಲ್ಯಾಣ್, ಮುಖ್ಯ ಅತಿಥಿಗಳು ಶಾಲು ಹೊದಿಸಿ, ಹಾರಾರ್ಪಣೆಗೈದು, ಪೇಟ ತೊಡಿಸಿ, ಫಲಪುಷ್ಪ ಅಭಿನಂದನಾ ಫಲಕ ನೀಡಿ ಗೌರವಿಸಿದರು.
ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಎಲ್.ಕೆ.ಜಿ ಅಭ್ಯಾಸ ಮಾಡುತ್ತಿರುವ ಬೇಬಿ ಪ್ರಶ್ವಿ ಶೆಟ್ಟಿಯ ಅಂಗನವಾಡಿ ಶಿಕ್ಷಕಿ ಪ್ರತಿಭಾ ಆಕೆಯ ಪ್ರತಿಭೆಯ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು. ತಾಯಿ ಕವಿತಾ ರೈ ಅವರು ನೀಡುವ ಪ್ರೋತ್ಸಾಹಗಳ ಕುರಿತು ತಿಳಿಸಿದರು.
ನಿವೃತ ಶಿಕ್ಷಕ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರು ಶುಭಹಾರೈಸಿದರು. ಕಲಾವಿದ, ಛಾಯಾಗ್ರಾಹಕ ಸುಧಾಕರ ರೈ ಪಾಲ್ತಾಡಿ ಅವರು ಶುಭಹಾರೈಸಿದರು.
ಕಲಾವಿದ ಕೃಷ್ಣಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.ಯುವಕ ಮಂಡಲದ ಅಧ್ಯಕ್ಷ ರಾಜೀವ ಗೌಡ ಅವರು ಕಲಾ ಮಾಣಿಕ್ಯ ಪ್ರಶಸ್ತಿ” ಸನ್ಮಾನ ಪತ್ರ ವಾಚಿಸಿದರು.
ಬೇಬಿ ಪ್ರಶ್ವಿ ಶೆಟ್ಟಿ ಮಾಡಾವು ಇವರ ತಂದೆ ಪ್ರಶಾಂತ್ ರೈ, ಹಿರಿಯರಾದ ಸುಗುಣ ಶೆಟ್ಟಿ, ಶ್ರೀಕೃಷ್ಣ ಯುವಕ ಮಂಡಲ ದ ಕಾರ್ಯದರ್ಶಿ ನವೀನ ಸಿಟಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.