ಸವಣೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಆರೆಲ್ತಡಿಯಲ್ಲಿ ‘ ಬೇಸಿಗೆ ಶಿಬಿರ -2025’ ಮನೋಲ್ಲಾಸ ಏಪ್ರಿಲ್ 2 ರಂದು ಉದ್ಘಾಟನೆಗೊಂಡಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ ಪಟ್ಟೆ ವಹಿಸಿದ್ದರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಕುದ್ಮನ ಮಜಲು, ಸಂಪನ್ಮೂಲ ವ್ಯಕ್ತಿ ಮಲ್ಲೇಶಯ್ಯ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಶ್ರೀಕಾಂತ್ ನಾಯ್ಕ.ಎಂ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿಯರಾದ ರಮ್ಯ ರೈ.ಕೆ ಕಾರ್ಯಕ್ರಮ ನಿರೂಪಿಸಿ, ದಿವ್ಯ.ಪಿ ವಂದಿಸಿದರು.
ಏಪ್ರಿಲ್ 2 ರಿಂದ 4 ರವರೆಗೆ 3 ದಿನ ನಡೆಯುವ ಶಿಬಿರದಲ್ಲಿ ಕಥೆ ರಚನೆ, ಕವನ ರಚನೆ,ಚಿತ್ರಕಲೆ, ಮುಖವಾಡ ತಯಾರಿ, ಪೇಪರ್ ಕ್ರಾಫ್ಟ್, ನಾಟಕಭಿನಯ,ಸ್ಪೋಕನ್ ಇಂಗ್ಲೀಷ್ ಮನರಂಜನೆ ಆಟಗಳು,ಶಾಸ್ತ್ರೀಯ ಬರವಣಿಗೆ, ಕರೋಕೆ ಹಾಡುಗಳು, ಮುಂತಾದ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡಲಿದ್ದಾರೆ.
ತರಬೇತಿಯನ್ನು ರಮೇಶ್ ಉಳಯ, ಶಿಕ್ಷಕರು& ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಮಲ್ಲೇಶಯ್ಯ, ಶಿಕ್ಷಕರು ಮತ್ತು & ಮಕ್ಕಳ ಸಾಹಿತಿಗಳು,ಇಂಗ್ಲೀಷ್ ಶಿಕ್ಷಕ ರಂಗನಾಥ್ ಸಂಪನ್ಮೂಲ ವ್ಯಕ್ತಿ ಹಾಗೂ ವಿವಿಧ ಸಂಪನ್ಮೂಲ ವ್ಯಕ್ತಿಗಳು ನೀಡಲಿದ್ದಾರೆ. ಬೆಳಗ್ಗಿನ ಲಘು ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ಒಂದೇ ಸೂರಿನಡಿ ವಿವಿಧ ತರಬೇತಿ ಗಳು. 1 ರಿಂದ 8 ನೇ ತರಗತಿ ಮಕ್ಕಳು ಭಾಗವಹಿಸಬಹುದು ಎಂದು ಮುಖ್ಯ ಗುರುಗಳು ತಿಳಿಸಿದ್ದಾರೆ.