ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಮರುದಿನ ಎ.11 ಮತ್ತು 12ರಂದು ಕಂಜೂರು ದೈವಸ್ಥಾನದಲ್ಲಿ ನಡೆಯುವ ದೈವಗಳ ನೇಮೋತ್ಸವಕ್ಕೆ ಎ.4ರಂದು ಗೊನೆಮುಹೂರ್ತ ನಡೆಯಿತು.
ಗೋಳ್ತಿಲ ಈಶ್ವರ ಗೌಡ ಅವರ ತೋಟದಲ್ಲಿ ಗೊನೆಮುಹೂರ್ತ ನೆರವೇರಿಸಲಾಯಿತು. ಈ ಸಂದರ್ಭ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಣಪ್ಪ ಮೂಲ್ಯ, ಸದಸ್ಯ ಬಾಲಕೃಷ್ಣ, ಗ್ರಾ.ಪಂ ಸದಸ್ಯ ಶೀನಪ್ಪ ಕುಲಾಲ್, ಚಂದ್ರಶೇಖರ್ ದೇವಸ್ಯ, ಲಕ್ಷ್ಮಣ ಗೌಡ ಹಲಂಗ, ರಾಮಣ್ಣ ಗೌಡ ಕುಂಟ್ಯಾನ, ವಿಶ್ವನಾಥ ಗೌಡ ಕಲ್ಲಿಮಾರ್, ಡೊಂಬಯ್ಯ ಗೌಡ, ಹುಕ್ರಪ್ಪ ಗೌಡ ಕುಂಟ್ಯಾನ, ರವಿ ಮತ್ತಿತರರು ಉಪಸ್ಥಿತರಿದ್ದರು.