ಜಿಲ್ಲಾ ಯಾದವ ಸಮ್ಮೇಳನದ ಪೂರ್ವಭಾವಿಯಾಗಿ ನಡೆದ ಯಾದವ ಕ್ರೀಡಾಕೂಟ

0

ಪಾಣಾಜೆ: ಏಪ್ರಿಲ್ 20 ರಂದು ಪಾಣಾಜೆಯಲ್ಲಿ ನಡೆಯಲಿರುವ ಜಿಲ್ಲಾ ಯಾದವ ಸಮ್ಮೇಳನದ ಪೂರ್ವಭಾವಿಯಾಗಿ ಯಾದವ ಕ್ರೀಡಾಕೂಟವು ಏ.6 ರಂದು ಆರ್ಲಪದವು ಸರಕಾರಿ ಹಿ.ಪ್ರಾ.ಶಾಲಾ ಮೈದಾನದಲ್ಲಿ ಜರಗಿತು.

ಸಭಾಧ್ಯಕ್ಷತೆ ವಹಿಸಿದ್ದ ಎ.ಕೆ.‌ಮಣಿಯಾಣಿ ‘ಹಳ್ಳಿ ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸೇರಲು ಪ್ರಯತ್ನಪಟ್ಟ ಎಲ್ಲರಿಗೂ ವಂದನೆ ಸಲ್ಲಿಸುತ್ತೇನೆ’ ಎಂದರು.

ದೀಪ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಲಕ್ಷ್ಮಣ ಬೊಳ್ಳಾಜೆ ಯವರು ಮಾತನಾಡಿ ‘ಕ್ರೀಡೋತ್ಸವ ಉತ್ತಮವಾಗಿ ಸಾಗಲಿ’ ಎಂದರು.

ಟ್ರೋಫಿ ಮೆರವಣಿಗೆಗೆ ನಾಗರಾಜನ್ ತಲೆಪ್ಪಾಡಿಯವರು ಚಾಲನೆ ನೀಡಿದರು. ಮುಖ್ಯ ಅತಿಥಿ ಮೆಸ್ಕಾಂ ಅಭಿಯಂತರೆ ವನಿತಾ ಕೆ. ಯಾದವ್ ಮಾತನಾಡಿ, ಇದೊಂದು ಸ್ನೇಹಕೂಟವಾದುದರಿಂದ ಎಲ್ಲರೂ ಒಳ್ಳೆಯ ರೀತಿಯಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಆಶಿಸಿದರು.

ಆರ್ಲಪದವು ಯಾದವ ಸಭಾ ಪ್ರಾದೇಶಿಕ ಸಮಿತಿ ಅಧ್ಯಕ್ಷ ಧನಂಜಯ ಯಾದವ್, ಕ್ರೈಂ ಬ್ರಾಂಚ್ ನ ಎನ್.ಎ. ಚಂದ್ರಶೇಖರ, ಯಾದವ ಸಭಾ ಕೇಂದ್ರ ಸಮಿತಿ ಕೋಶಾಧಿಕಾರಿ ಚಂದ್ರಶೇಖರ, ಬಂಟ್ವಾಳ ತಾಲೂಕು ಅಧ್ಯಕ್ಷ ಅಶೋಕ್ ಅಮೈ, ಮಂಗಳೂರು ತಾಲೂಕು ಅಧ್ಯಕ್ಷ ಕೃಷ್ಣ ಬಿ. ಪಡೀಲ್, ಸುಳ್ಯ ತಾಲೂಕು ಅಧ್ಯಕ್ಷ ಕರುಣಾಕರ ಆಸ್ವಾರೆ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಟಿ. ಉಪಸ್ಥಿತರಿದ್ದರು.

ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಯಾದವ ಸಭಾ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ರವರು, ಯಾದವ ಸಮುದಾಯದವರು ಪ್ರತಿಯೊಂದು ಕ್ಷೇತ್ರದಲ್ಲಿ ಯೂ ಇಂದು ಸಾಧನೆ ಮಾಡಿದವರಿದ್ದಾರೆ. ಇನ್ನಷ್ಟು ಇದು ಬೆಳೆದುಬರಬೇಕೆಂಬುದು ಕ್ರೀಡಾಕೂಟ ಮತ್ತು ಸಮ್ಮೇಳನದ ಉದ್ದೇಶವಾಗಿದೆ’ ಎಂದರು. ಜಿಲ್ಲಾ ಯಾದವ ಸಮ್ಮೇಳನದ ಪೂರ್ವಭಾವಿಯಾಗಿ ಹಮ್ಮಿಕೊಂಡ ಯಾದವ ಕ್ರೀಡಾಕೂಟಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ, ಏ. 20 ರಂದು ನಡೆಯಲಿರುವ ಯಾದವ ಸಮ್ಮೇಳನಕ್ಕೂ ಎಲ್ಲರ ಸಹಕಾರವನ್ನು ಕೋರಿದರು.


ಯಾದವ ಸಭಾ ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಸದಾನಂದ ಕಾವೂರು ವಂದಿಸಿದರು. ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಯಾದವ ಸಬಾ ಪಾಣಾಜೆ ಸಮಿತಿ ಕಾರ್ಯದರ್ಶಿ‌ ನವೀನ್, ಕುಂಞಿ ಮಣಿಯಾಣಿ, ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷೆ, ಜಯಶ್ರೀ,‌ ಸುಶಾಂತ್ ಮಣಿಯಾಣಿ, ದಿನೇಶ್ ಯಾದವ್, ಗೋಪಾಲ ಮಣಿಯಾಣಿ ದೇವಸ್ಯ, ಹರಿಕೃಷ್ಣ ಕಂಪ ಅತಿಥಿಗಳನ್ನು ಸ್ವಾಗತಿಸಿದರು.


ಮೆರವಣಿಗೆ
ಆರ್ಲಪದವು ಶ್ರೀ ಪೂಮಾಣಿ, ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನದ ಮುಂಭಾಗದಲ್ಲಿ ತೆಂಗಿನಕಾಯಿ ಒಡೆದು ಬಳಿಕ ಟ್ರೋಫಿ ಮೆರವಣಿಗೆ ನಡೆಯಿತು. ಮಣಿಕಂಠ ಚೆಂಡೆ ಮೇಳದವರಿಂದ ಸಿಂಗಾರಿ ಮೇಳ ನಡೆಯಿತು. ಜಿಲ್ಲಾ ಮಟ್ಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾದವ ಸಮುದಾಯದವರು ಪಾಲ್ಗೊಂಡದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here