ಬಡಗನ್ನೂರು: ಬಡಗನ್ನೂರು ಗ್ರಾಮದ ಉಳಯ ದಯಾನಂದ ಗೌಡ ರವರ ಶೖದ್ದಾಂಜಲಿ ಕಾರ್ಯಕ್ರಮವು ಏ. 8 ರಂದು ಉಳಯ ಸ್ವಗೃಹದಲ್ಲಿ ನಡೆಯಿತು.
ಪಟ್ಟೆ ಪ್ರತಿಭಾ ಪ್ರೌಢಶಾಲಾ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ದೇವರ ಪಾದಕ್ಕೆ ಐಕ್ಯರಾದ ದಯಾನಂದ ಗೌಡ ರವರಿಗೆ ನುಡಿನಮನ ಸಲ್ಲಿಸಿ ಶ್ರೀಯುತರು ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದರು. ಮನುಷ್ಯನಾಗಿ ಹುಟ್ಟಿದ ಎಲ್ಲರಿಗೂ ಸಾವು ನಿಶ್ಚಿತ ಮೃತರ ದುಃಖವನ್ನು ಸಹಿಸುವ ಶಕ್ತಿಯನ್ನು ಪತ್ನಿ ,ಮಗ, ಮಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸಿ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪತ್ನಿ ವಿನುತಾ, ಮಗಳು ಪ್ರೇಕ್ಷಾ, ಸಹೋದರರಾದ ಸೀತಾರಾಮ ಗೌಡ, ಶಿವಣ್ಣ ಗೌಡ, ಉಪೇಂದ್ರ ಗೌಡ, ಪರಮೇಶ್ವರ್ ಗೌಡ ಹಾಗೂ ಓರ್ವ ಸಹೋದರಿ ವಸಂತಿ ಹಾಗೂ ಕುಟುಂಬಸ್ಥರು ಬಂಧು ಮಿತ್ರರು ಉಪಸ್ಥಿತರಿದ್ದರು.