ರಾಮಕುಂಜ: 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿಗೆ ಶೇ.94.81 ತೇರ್ಗಡೆ ಫಲಿತಾಂಶ ಲಭಿಸಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು 270 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 256 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.94.81 ಫಲಿತಾಂಶ ಲಭಿಸಿದೆ. 52 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 161 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 39 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಕಲಾ ವಿಭಾಗ ಶೇ.89.47:
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 19 ವಿದ್ಯಾರ್ಥಿಗಳ ಪೈಕಿ 17 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು ಶೇ. 89.47 ಫಲಿತಾಂಶ ಬಂದಿದೆ. 3 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಕಾವ್ಯಶ್ರೀ ಎ 557, ಹರ್ಷಿಣಿ 515, ಮಮತ 511 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗ ಶೇ.95.42
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 153 ವಿದ್ಯಾರ್ಥಿಗಳ ಪೈಕಿ 146 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.95.42 ಫಲಿತಾಂಶ ಬಂದಿದೆ. 30 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 88 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 25 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸ್ವೀನಿ ಡಿ.ಸೋಜ 581, ಪವಿತ್ರ 571, ಆಯಿಷಾ ಸೈಮಾ 564, ದೀಕ್ಷಾ ಎಸ್ 560, ಹಂಸಿನಿ 559, ಫಾತಿಮತ್ ಫರ್ಝಾನಾ 555, ನಿಸರ್ಗ 552, ಕಿರಣ್ ಕೆ 550, ಶ್ವೇತಾ ಎ 546, ದೀಕ್ಷಾ ಬಿ 547, ಅರ್ಚನಾ ಎಸ್. 543, ರಾಜೇಶ್ ಭಾರದ್ವಾಜ್ 542, ಚೈತ್ರಾ ಎಸ್. 541, ಕಾವ್ಯ ಕೆ.541, ಪ್ರೇಕ್ಷಾ ಎ 537, ರುಬೀನಾ 535, ಪ್ರಾಪ್ತಿ ಪಿ ಗೌಡ 534, ಅಭಿಲಾಷ ಎ 531, ಕಮರುನ್ನೀಸಾ ಸಹೀಮಾ 529, ಶರಧಿ ಕೆ. 525, ಸನಿಹಾ 522, ಶ್ವೇತಾಕ್ಷಿ 521, ನಿತಿನ್ 520, ಸುಪ್ರಿಯಾ 518, ಶ್ರೇಯಸ್‌ಕುಮಾರ್ 517, ಅಕ್ಷತಾ 515, ಪೂರ್ಣಿಮಾ 514, ಸಮೃದ್ಧ ಎಂ.ಕೆ. 513, ಪ್ರಥ್ವಿ ಪಿ.ಎಸ್. 512 ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗ ಶೇ.94.90
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 98 ವಿದ್ಯಾರ್ಥಿಗಳ ಪೈಕಿ 93 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.94.90 ತೇರ್ಗಡೆ ಫಲಿತಾಂಶ ಲಭಿಸಿದೆ. 19 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 65 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 9 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮಧುಶ್ರೀ ಎ 577, ಶ್ರೇಯಸ್ 574, ಚೇತನ್ ಹೆಚ್.ಎಸ್. 566, ತರುಣ್ ಕೆ.ಎಂ. 556, ಇಂಚರ ಎಂ.ಎಸ್.554, ಸಹೀಲ್ ಎನ್.ಕೆ. 549, ಜ್ಯೇಷ್ಠ ಬಿ ರಾಜ್ 547, ಅನುಶ್ರೀ 545, ಭವ್ಯ ಪಿ.ಜಿ.544, ನಿಧಿಕ್ಷಾ 536, ಸಾಯಿ ಪ್ರತೀಶ್ ಬಿ 528, ಚಂದ್ರಕಾAತ್ 526, ಜೀವನ್ ವಿ.ಎಸ್. 525, ಶ್ರೀರಕ್ಷಾ ಪಿ.ಆರ್.525, ಶ್ರೀನಿಧಿ ಪಿ 522, ಭರತ್ ಕೆ. 519, ಮಹಮ್ಮದ್ ಅಫ್ನಾನ್ ಶಾಹಿಲ್ ಎಂ.ಎಸ್. 518, ಪ್ರೇಮಾ 512, ದೀಪ್ತಿ ಬಿ.ಎಸ್.511 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.