ಕೆಯ್ಯೂರು : ಮಾರ್ಚ್ 2025ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ರಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಕೆಯ್ಯೂರು ಶೇ. 96 ಫಲಿತಾಂಶ ಗಳಿಸಿದೆ. ಹಾಜರಾದ ಒಟ್ಟು 70 ವಿದ್ಯಾರ್ಥಿಗಳ ಪೈಕಿ 67 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 44 ಪ್ರಥಮ ಶ್ರೇಣಿ, 7 ದ್ವಿತೀಯ ಶ್ರೇಣಿ ಹಾಗೂ 7 ವಿದ್ಯಾರ್ಥಿಗಳು ತೃತೀಯ ಶ್ರೇಣಿ ಪಡೆದಿದ್ದಾರೆ.
ಕಲಾ ವಿಭಾಗ :
ಪರೀಕ್ಷೆಗೆ ಹಾಜರಾದ 23 ವಿದ್ಯಾರ್ಥಿಗಳ ಪೈಕಿ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 91. 3 ಫಲಿತಾಂಶ ಬಂದಿರುತ್ತದೆ. ಸುಪ್ರೀತಾ (540), ಲಿಖಿತಾ ಪಿ (523) ವಿಶಿಷ್ಟ ಶ್ರೇಣಿ ಗಳಿಸಿದ್ದಾರೆ.
ವಾಣಿಜ್ಯ ವಿಭಾಗ :
ವಾಣಿಜ್ಯ ವಿಭಾಗದಲ್ಲಿ 37 ವಿದ್ಯಾರ್ಥಿಗಳ ಪೈಕಿ 36 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 97.3 ಫಲಿತಾಂಶ ಬಂದಿರುತ್ತದೆ. ಲಿಖಿತಾ ರೈ (577), ಆಯಿಷತ್ ಫರ್ಜಾನಾ (543), ಫಾತಿಮತ್ ಸಫೀದಾ (531), ಪವನ್ ಕುಮಾರ್ ರೈ (527), ಸೌಭಾಗ್ಯಶ್ರೀ (522), ಅಪೂರ್ವಾ ಎ (514), ಪಾತಿಮತ್ ತಸ್ಲೀಮಾ (512) ವಿಶಿಷ್ಟಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮರಿಯಮ್ಮತ್ ರುಮೈಸಾ (506), ಶಿವಲ್ಯಾ ಕೆ (505), ಅಸ್ಮಾ (502), ಮಹಮ್ಮದ್ ಜಿಯಾದ್ (501) ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗ :
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಶೇ. 100 ಫಲಿತಾಂಶ ಬಂದಿರುತ್ತದೆ. ಫಾತಿಮತ್ ತಸ್ಫಿಯಾ 501 ಅಂಕ ಗಳಿಸಿದ್ದಾರೆ.