ರಾಮಕುಂಜ: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಆತೂರು ಬದ್ರಿಯಾ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 5 ವಿದ್ಯಾರ್ಥಿನಿಯರೂ ತೇರ್ಗಡೆಯಾಗಿದ್ದು ಶೇ.100 ಫಲಿತಾಂಶ ಲಭಿಸಿದೆ. ಮೂವರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ಹಾಗೂ ಇಬ್ಬರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇರ್ಫಾನ 547, ಸಿಫಾನಾ 543 ಹಾಗೂ ಅಫೀಫ 525 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಹಾಗೂ ಫಾತಿಮತ್ ರಿಫಾ ಶಾಝಿಯಾ 475, ಆಯಿಷತ್ ಶಫಾ 430 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.