ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ರ ಚತುಷ್ಪಥ ಕಾಮಗಾರಿ ಸರ್ವೆ ಕಾರ್ಯ ಆರಂಭ: ಶೀಘ್ರದಲ್ಲೇ ಸರಕಾರಕ್ಕೆ ಸಮಗ್ರಯೋಜನಾ ವರದಿ ಸಲ್ಲಿಕೆ

0

ಪುತ್ತೂರು: ಬಹು ಅಪೇಕ್ಷಿತ ಮಾಣಿ- ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275ರ ಚತುಷ್ಪಥ ಕಾಮಗಾರಿಗೆ ಚಾಲನೆ ದೊರಕಿದ್ದು ಕಳೆದ ನಾಲ್ಕು ದಿನಗಳಿಂದ ಸರ್ವೆ ಕಾರ್ಯ ಪ್ರಾರಂಭವಾಗಿದೆ.
ಮಾಣಿಯಿಂದ ಸಂಪಾಜೆ ತನಕ ಸುಮಾರು 70 ಕಿ ಮೀ ಹೆದ್ದಾರಿ ಚತುಷ್ಪಥವಾಗಿ ಮೇಲ್ದರ್ಜೆಗೇರಲಿದೆ. ಈ ರಸ್ತೆಯ ಸಮಗ್ರ ಯೋಜನಾ ವರದಿ ಸಿದ್ದಪಡಿಸುವಂತೆ ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಕಳೆದ ಎರಡು ವಾರಗಳ ಹಿಂದೆ ಶಿಫಾರಸ್ಸು ಸಲ್ಲಿಸಿ ಡಿಪಿಆರ್‌ಗೆ ಅನುದಾನವನ್ನು ಬಿಡುಗಡೆ ಮಾಡಿದ್ದರು. ಪುತ್ತೂರು ಶಾಸಕರಾದ ಅಶೋಕ್ ರೈ ಮತ್ತು ಸಂಸದ ಬ್ರಿಜೇಶ್ ಚೌಟರವರು ಲೋಕೋಪಯೋಗಿ ಸಚಿವರಲ್ಲಿ ಜಂಟಿಯಾಗಿ ಮನವಿ ಸಲ್ಲಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಅನುದಾನದಲ್ಲಿ ಹೈವೇ ಕಾಮಗಾರಿ ನಡೆಯಲಿದೆ.

26೦೦ ಕೋಟಿ ಅನುದಾನ ಬಿಡುಗಡೆಯಾಗಲಿದೆ
ಮಾಣಿಯಿಂದ ಸಂಪಾಜೆ ತನಕ ಸುಮಾರು 70 ಕಿ ಮೀ ಹೆದ್ದಾರಿ ಕಾಮಗಾರಿಗೆ ಸುಮಾರು 2600 ಕೋಟಿ ರೂ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಭೂ ಒತ್ತುವರಿ ಪ್ರಕ್ರಿಯೆಗೆ ಚಾಲನೆ ನೀಡುವ ಮೊದಲು ಸರ್ವೆ ಕಾರ್ಯು ಆರಂಭವಾಗಲಿದ್ದು , ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ಸರಕಾರಕ್ಕೆ ಸಮಗ್ರ ಯೋಜನಾವರದಿಯನ್ನು ಸಲ್ಲಿಸಲಾಗುತ್ತದೆ. ಆ ಬಳಿಕ ಭೂ ಒತ್ತುವರಿ ಮತ್ತು ಪರಿಹಾರ ಹಂಚುವ ಕಾರ್ಯ ನಡೆಯಲಿದೆ ಇದರ ಜೊತೆಗೆ ರಸ್ತೆ ಅಗಲೀಕರಣ ಕಾಮಗಾರಿಯೂ ಆರಂಭವಾಗಲಿದೆ.

ಮಾಣಿಯಿಂದ ಸಮಪಾಜೆ ತನಕ ಸುಮಾರು 70 ಕಿ ಮೀ ಹೆದ್ದಾರಿ ಚತುಷ್ಪಥವಾಗಿ ಮೇಲ್ದರ್ಜೆಗೇರಲಿದೆ. ಇದು ಬಹುಬೇಡಿಕೆಯ ಕಾಮಗಾರಿಯಾಗಿದೆ. ಮಂಗಳೂರಿನಿಂದ ಮಾಣಿ ತನಕ ಹೆದ್ದಾರಿ ಅಭಿವೃದ್ದಿ ಕಾಮಗಾರಿ ಈಗಾಗಲೇ ಅಂತಿಮ ಹಂತದಲ್ಲಿದೆ, ಮುಂದೆ ಮಾಣಿಯಿಂದ ಸಂಪಾಜೆ ತನಕ ಚತುಷ್ಪಥ ರಸ್ತೆಯಾದಲ್ಲಿ ಪುತ್ತೂರು ಅಭಿವೃದ್ದಿಯಾಗಲಿದೆ. ಮುಂದಿನ ದಿನಗಳಲ್ಲಿ ಪುತ್ತೂರಿನಿಂದ ಮಂಗಳೂರಿಗೆ 45 ನಿಮಿಷದಲ್ಲಿ ತಲುಪಬಹುದಾಗಿದೆ. ರಸ್ತೆ ಅಭಿವೃದ್ದಿಯಾದಲ್ಲಿ ಒಂದರ ಮೇಲೊಂದು ಅಭಿವೃದ್ದಿಯಾಗುತ್ತಲೇ ಬರುತ್ತದೆ. ಸರ್ವೆ ಕಾರ್ಯ ನಡೆದ ಬಳಿಕ ಸಮಗ್ರ ಯೋಜನಾ ವರದಿಯನ್ನು ಸರಕಾರದ ಮುಂದೆ ಸಲ್ಲಿಸಲಾಗುತ್ತದೆ.
ಅಶೋಕ್ ರೈ , ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here