*ಜ್ಯೋತಿಷ್ಯಶಾಸ್ತ್ರ, ಯೋಗವಿಜ್ಞಾನ ಸಹಿತ ಉದ್ಯೋಗಕೇಂದ್ರಿತ ಅಧ್ಯಯನ ವಿಷಯಗಳು
*ಬಿ.ಕಾಂ ಜತೆಗೆ ಸಿಎ/ಐಬಿಪಿಎಸ್ ಕೋಚಿಂಗ್ – ದಾಖಲೆಯ ಫಲಿತಾಂಶ
ಪುತ್ತೂರು : ಪದವಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಕುಸಿಯುತ್ತಿದೆ ಎಂಬ ಮಾತುಗಳು ಅಲ್ಲಿಲ್ಲಿ ಕೇಳಿಬರುತ್ತಿವೆ. ಹಾಗಾಗಿಯೇ ಪಿಯುಸಿ ನಂತರ ಪದವಿ ಶಿಕ್ಷಣಕ್ಕೆ ಅಡಿಯಿಡುವುದಕ್ಕೆ ಅನೇಕ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪದವಿ ಶಿಕ್ಷಣ ಮುಗಿದ ತಕ್ಷಣ ಉದ್ಯೋಗ ದೊರಕಬಹುದಾದ ಅಥವ ಸ್ವಯಂ ಉದ್ಯೋಗ ಕೈಗೊಳ್ಳಬಹುದಾದ ಹೊಸ ಬಗೆಯ ಕೋರ್ಸ್‌ಗಳನ್ನು ಪುತ್ತೂರಿನ ಅಂಬಿಕಾ ಪದವಿ ಮಹಾವಿದ್ಯಾಲಯ ಒದಗಿಸಿಕೊಡುತ್ತಿದೆ.
ಪಿಯು ಶಿಕ್ಷಣ ಪೂರೈಸಿದ ನಂತರ ಯಾವ ಕಾಲೇಜಿಗೆ ಸೇರಿಕೊಳ್ಳಬೇಕು? ಯಾವ ಕೋರ್ಸ್ ಅನ್ನು ಆಯ್ದುಕೊಳ್ಳಬೇಕು? ವಿಷಯ ಸಂಯೋಜನೆಗಳು (ಕಾಂಬಿನೇಶನ್) ಯಾವುದಿರಬೇಕು? ಯಾವ ವಿಷಯಗಳನ್ನು ಓದಿದರೆ ಮುಂದೆ ಉತ್ತಮ ಭವಿಷ್ಯ ಸಾಕಾರಗೊಳ್ಳಬಹುದು? ಇತ್ಯಾದಿ ವಿಷಯಗಳ ಬಗೆಗೆ ಇದೀಗ ತಾನೇ ಪಿ.ಯು ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳೇಳುವುದು ಸಹಜ. ಅನೇಕ ಹೆತ್ತವರಲ್ಲೂ ಇಂತಹ ಗೊಂದಲಗಳಿರುವುದು ಸಾಮಾನ್ಯ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಕಾಣಿಸಿಕೊಳ್ಳುವ ಶಿಕ್ಷಣ ಸಂಸ್ಥೆಯೆಂದರೆ ಪುತ್ತೂರಿನ ಅಂಬಿಕಾ ಪದವಿ ಕಾಲೇಜು.
ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ, ವೃತ್ತಿಪರ ಮತ್ತು ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಇದೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯದಡಿ ಜ್ಯೋತಿಷ್ಯಶಾಸ್ತ್ರ ವಿಷಯವನ್ನು ಬಿ.ಎಸ್ಸಿ ಪದವಿಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಈ ಸಂಸ್ಥೆಯಲ್ಲಿ ಒದಗಿಸಿಕೊಡಲಾಗುತ್ತದೆ. ಜತೆಗೆ ಯೋಗವಿಜ್ಞಾನ, ಮನಃಶಾಸ್ತ್ರ, ತತ್ತ್ವಶಾಸ್ತ್ರ ವಿಷಯಗಳನ್ನೂ ಒದಗಿಸಿಕೊಡಲಾಗುತ್ತಿದೆ.
ಇದಲ್ಲದೆ ಪುತ್ತೂರಿನ ಆಸುಪಾಸಿನ ವಾಣಿಜ್ಯ ವಿದ್ಯಾರ್ಥಿಗಳಲ್ಲಿನ ಆಸಕ್ತಿಯನ್ನು ಗಮನಿಸಿ ಸಿಎ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅಡಿಯಿಡಬೇಕಾದರೆ ಎದುರಿಸಬೇಕಾದ ಐಬಿಪಿಎಸ್ ಪರೀಕ್ಷಾ ತರಬೇತಿ ಸಹಿತವಾಗಿರುವ ಇಂಟಗ್ರೇಟೆಡ್ ಬಿಕಾಂ ಅನ್ನು ಅಂಬಿಕಾ ಕಾಲೇಜು ಆರಂಭಿಸಿದೆ. ಹಾಗಾಗಿ ಇಂತಹ ತರಬೇತಿಗಳಿಗಾಗಿ ದೂರದ ಊರುಗಳಿಗೆ ತೆರಳಬೇಕಾದ ಅವಶ್ಯಕತೆ ಪುತ್ತೂರಿನ ವಿದ್ಯಾರ್ಥಿಗಳಿಗೆ ಇಲ್ಲ ಎಂಬುದು ಗಮನಾರ್ಹ ವಿಚಾರ. ಹಾಗೆಯೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಧಿಕ ಉದ್ಯೋಗಾವಕಾಶ ಇರುವುದರಿಂದ ಪದವಿ ಹಂತದಲ್ಲೇ ಬಿಕಾಂ ಜತೆಗೆ ಐಬಿಪಿಎಸ್ ಪರೀಕ್ಷಾ ತರಬೇತಿ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ದೊರೆಯಲಿದೆ. ಹಾಗಾಗಿಯೇ ಇಂದು ಅಂಬಿಕಾ ಪದವಿ ಕಾಲೇಜು ವಾಣಿಜ್ಯ ವಿದ್ಯಾರ್ಥಿಗಳ ನೆಚ್ಚಿನ ತಾಣವೆನಿಸಿದೆ. ಇದರೊಂದಿಗೆ ಜನರಲ್ ಬಿ.ಕಾಂ ಕೂಡ ಇಲ್ಲಿ ಲಭ್ಯವಿದೆ.
ಬಿ.ಎ. ವಿಭಾಗದಲ್ಲಿ ಅತ್ಯಧಿಕ ಉದ್ಯೋಗಾವಕಾಶಗಳುಳ್ಳ ಪತ್ರಿಕೋದ್ಯಮ, ಐಚ್ಚಿಕ ಇಂಗ್ಲಿಷ್, ಮನಃಶಾಸ್ತ್ರದಂತಹ ವಿಷಯಗಳನ್ನು ಹೊಂದಿರುವುದು ಈ ವಿದ್ಯಾ ಸಂಸ್ಥೆಯ ವಿಶೇಷತೆ. ಇದಲ್ಲದೆ ತತ್ತ್ವಶಾಸ್ತ್ರ, ಐಚ್ಚಿಕ ಕನ್ನಡ ವಿಷಯಗಳೂ ಇಲ್ಲಿ ಲಭ್ಯ.
ಜ್ಯೋತಿಷ್ಯ ಶಾಸ್ತ್ರ ಬೋಧಿಸುವ ರಾಜ್ಯದ ಏಕೈಕ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ಮಾತ್ರವಲ್ಲದೆ ಇಡಿಯ ರಾಜ್ಯದಲ್ಲೇ ಸಂಸ್ಕೃತ ವಿ.ವಿ.ಗಳನ್ನು ಹೊರತುಪಡಿಸಿದಂತೆ ಪಾರಂಪರಿಕ ವಿಶ್ವವಿದ್ಯಾನಿಲಯಗಳಲ್ಲಿ ಅಥವ ರಾಜ್ಯದ ಯಾವುದೇ ಕಾಲೇಜಿನಲ್ಲಿ ಜ್ಯೋತಿಷ್ಯಶಾಸ್ತ್ರವನ್ನು ಬೋಧಿಸಲಾಗುತ್ತಿಲ್ಲ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅಂಬಿಕಾ ಪದವಿ ಕಾಲೇಜು ಈ ಶಿಕ್ಷಣವನ್ನು ನೀಡಲು ಹೊರಟಿದೆ. ಪದವಿಯ ನಂತರ ಸ್ವಯಂ ಉದ್ಯೋಗ ಸೃಷ್ಟಿಗೆ ಈ ಅಧ್ಯಯನ ಸಹಕರಿಸಲಿದೆ. ಜತೆಗೆ ಮಂಗಳೂರು ವಿಶ್ವವಿದ್ಯಾನಿಲಯದಡಿ ಯೋಗ ವಿಜ್ಞಾನವನ್ನೂ ಪದವಿಯಲ್ಲಿ ಆರಂಭಿಸುತ್ತಿರುವ ಕೀರ್ತಿ ಅಂಬಿಕಾಕ್ಕೆ ಸಲ್ಲುತ್ತಿದೆ. ಪಿಯುಸಿಯಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಹೀಗೆ ಯಾವ ಶಿಕ್ಷಣ ಪಡೆದಿದ್ದರೂ ಅಂಬಿಕಾ ಪದವಿ ಕಾಲೇಜಿನಲ್ಲಿ ಜ್ಯೋತಿಷ್ಯಶಾಸ್ತ್ರ ಬಿಎಸ್ಸಿಗೆ ವಿದಾರ್ಥಿಗಳು ದಾಖಲಾಗಬಹುದೆಂಬುದು ವಿಶೇಷ. ಜ್ಯೋತಿಷ್ಯಶಾಸ್ತ್ರದ ಅಧ್ಯಯನದಿಂದ ವೃತ್ತಿಪರ ಜ್ಯೋತಿಷಿಯಾಗಿ ಕಾರ್ಯ ನಿರ್ವಹಿಸಬಹುದು ಮಾತ್ರವಲ್ಲದೆ ವಾಸ್ತುತಜ್ಞರಾಗಿಯೂ ವೃತ್ತಿ ಆರಂಭಿಸುವುದಕ್ಕೆ ಸಾಧ್ಯ. ಯೋಗವಿಜ್ಞಾನದ ಅಧ್ಯಯನವೂ ಸ್ವಂತ ಯೋಗಕೇಂದ್ರವನ್ನು ಆರಂಭಿಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಿದೆ. ಜತೆಗೆ ಇಂದು ಯೋಗವಿಜ್ಞಾನ ಓದಿದ ವಿದ್ಯಾರ್ಥಿಗಳಿಗೆ ದೇಶ – ವಿದೇಶಗಳಲ್ಲೂ ಭಾರೀ ಬೇಡಿಕೆ ಇದೆ. ಹಾಗಾಗಿ ಪದವಿ ಓದಿದ ತಕ್ಷಣ ಅತ್ಯುತ್ತಮ ಉದ್ಯೋಗವನ್ನು ತಮ್ಮದಾಗಿಸುವ ಅವಕಾಶ ವಿದ್ಯಾರ್ಥಿಗಳಿಗೆ ದೊರಕಲಿದೆ.
ಪುತ್ತೂರಿನಲ್ಲಿ ಮನಃಶಾಸ್ತ್ರ ಆರಂಭಿಸಿದ ಮೊದಲ ಕಾಲೇಜು:
ಪುತ್ತೂರು ಪರಿಸರದಲ್ಲಿ ಮನಃಶಾಸ್ತ್ರವನ್ನು ಪದವಿ ಹಂತದಲ್ಲಿ ಮೊದಲಿಗೆ ಪರಿಚಯಿಸಿದ ಕೀರ್ತಿ ಅಂಬಿಕಾ ಡಿಗ್ರಿ ಕಾಲೇಜಿನದ್ದು. ಹಾಗಾಗಿ ಈ ಪ್ರದೇಶದ ಮನಃಶಾಸ್ತ್ರ ಆಸಕ್ತ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಅಧ್ಯಯನ ಮಾಡುವುದಕ್ಕೆ ಅವಕಾಶ ದೊರಕಿದಂತಾಗಿದೆ. ಮನಃಶಾಸ್ತ್ರ ವಿಷಯಕ್ಕೆ ಇಂದು ಅಪಾರ ಬೇಡಿಕೆಯಿದ್ದು ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ತಯಾರಾಗುತ್ತಿಲ್ಲ ಎಂಬುದು ಗಮನಾರ್ಹ ಸಂಗತಿ. ಮನುಷ್ಯನ ಒತ್ತಡಯುಕ್ತ ಬದುಕಿನಿಂದಾಗಿ ಇಂದು ಆಪ್ತಸಲಹೆ ಕೇಂದ್ರಗಳಿಗೆ ಅಪಾರ ಬೇಡಿಕೆಯಿದೆ. ಪ್ರತಿಯೊಂದು ಆಸ್ಪತ್ರೆಯಲ್ಲೂ ಮನಃಶಾಸ್ತ್ರಜ್ಞರ ಅವಶ್ಯಕತೆ ಇದೆತಿದಲ್ಲದೆ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲೂ ಮನಃಶಾಸ್ತ್ರಜ್ಞರು, ಆಪ್ತಸಮಾಲೋಚಕರು ಬೇಕು ಎಂಬುದನ್ನು ಶಿಕ್ಷಣ ಸಂಸ್ಥೆಗಳ ನೇತಾರರು ಮಾತ್ರವಲ್ಲದೆ ಸರ್ಕಾರವೂ ಅಭಿಪ್ರಾಯಿಸುತ್ತಿದೆ. ಹಾಗಾಗಿ ಇನ್ನು ಕೆಲವೇ ವರ್ಷಗಳಲ್ಲಿ ಒಮ್ಮಿಂದೊಮ್ಮೆಗೆ ಮನಃಶಾಸ್ತ್ರ ಓದಿದ ವಿದ್ಯಾರ್ಥಿಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಗಲಿದೆ.
ಮಂಗಳೂರು ವಿವಿಯಡಿ ತತ್ತ್ವಶಾಸ್ತ್ರ ಬೋಧಿಸುತ್ತಿರುವ ಏಕೈಕ ಕಾಲೇಜು:
ಭಾರತೀಯ ತತ್ತ್ವಜ್ಞಾನವನ್ನು ಎಳೆಯ ಮನಸ್ಸುಗಳಲ್ಲಿ ತುಂಬಿ ಬೌದ್ಧಿಕ ಶ್ರೀಮಂತ ಸಮಾಜವನ್ನು ರೂಪಿಸುವ ಕನಸಿನೊಂದಿಗೆ ಅಂಬಿಕಾ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿಯೇ ಪದವಿ ಹಂತದ ಬಿಎ ವಿಭಾಗದಲ್ಲಿ ಇನ್ನಿತರ ಐಚ್ಚಿಕ ವಿಷಯಗಳೊಂದಿಗೆ ತತ್ತ್ವಶಾಸ್ತ್ರವನ್ನೂ ಒಂದು ಆಯ್ಕೆಯಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಈ ಮಧ್ಯೆ, ಮನಃಶಾಸ್ತ್ರ ಹಾಗೂ ತತ್ತ್ವಶಾಸ್ತ್ರವನ್ನು ಜತೆಯಾಗಿ ಅಧ್ಯಯನ ಮಾಡಿದವರು ಅತ್ಯುತ್ಕೃಷ್ಟ ಮನಃಶಾಸ್ತ್ರಜ್ಞರಾಗಿ ಹೊರಹೊಮ್ಮುವುದಕ್ಕೆ ಸಾಧ್ಯವಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದಡಿ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳಲ್ಲಿ ತತ್ತ್ವಶಾಸ್ತ್ರ ಬೋಧಿಸುತ್ತಿರುವ ಏಕೈಕ ಕಾಲೇಜೆಂಬ ಹೆಗ್ಗಳಿಕೆ ಅಂಬಿಕಾ ಮಹಾವಿದ್ಯಾಲಯದ್ದು.
ರ‍್ಯಾಂಕ್ ಗಳಿಕೆ ಹಾಗೂ ಸಿ.ಎ. ಪರೀಕ್ಷೆ ತೇರ್ಗಡೆ :
ಅಂಬಿಕಾ ಪದವಿ ಕಾಲೇಜಿನ ಶಿಕ್ಷಣದ ಗುಣಮಟ್ಟಕ್ಕೆ ಕಾಲೇಜಿಗೆ ಲಭ್ಯವಾಗಿರುವ ರ‍್ಯಾಂಕ್‌ಗಳೇ ಸಾಕ್ಷಿ. 2023-24ನೇ ಸಾಲಿನ ಬಿ.ಎ ಹಾಗೂ ಬಿಎಸ್ಸಿ ಪದವಿಯಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೇ ರ‍್ಯಾಂಕ್ ಗಳಿಸಿ ಇಲ್ಲಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಜತೆಗೆ ಅಂಬಿಕಾದಲ್ಲಿ ಬಿ.ಕಾಂ ಜತೆಗೆ ಸಿ.ಎ ತರಬೇತಿ ಪೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಮಂದಿ ಸಿ.ಎ. ಫೌಂಡೇಶನ್, ಐಪಿಸಿಸಿ ಗ್ರೂಪ್ 1 ಹಾಗೂ ಐಪಿಸಿಸಿ ಗ್ರೂಪ್ 2 ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಎರಡನೆಯ ವರ್ಷದ ಬಿ.ಕಾಂ ಪೂರೈಸುವ ಮೊದಲೇ ಸಿ.ಎ. ಆರ್ಟಿಕಲ್‌ಶಿಪ್‌ಗೆ ತೆರಳುತ್ತಿರುವುದು ಗಮನಾರ್ಹ. ಇಂತಹ ಫಲಿತಾಂಶದಿಂದಾಗಿ ಅನೇಕ ಮಂದಿ ಸಿಎ ಆಕಾಂಕ್ಷಿಗಳು ಅಂಬಿಕಾ ಪದವಿ ಕಾಲೇಜಿನ ಬಿ.ಕಾಂ ಪದವಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಜತೆಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಐಬಿಪಿಎಸ್ ಕೋಚಿಂಗ್ ಕೂಡ ಇಲ್ಲಿ ಲಭ್ಯ ಇರುವುದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕೆಂಬ ಹಂಬಲವಿರುವ ಎಷ್ಟೋ ಮಂದಿ ವಿದ್ಯಾರ್ಥಿಗಳಿಗೆ ಅನುಕೂಲವೆನಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ :
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು ಈ ಸಂಸ್ಥೆಯ ಮತ್ತೊಂದು ವೈಶಿಷ್ಟ್ಯ. ಇಂದು ಪದವಿ ಪೂರೈಸುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮಾತ್ರ ಸರ್ಕಾರಿ ಉದ್ಯೋಗಗಳ ಬಾಗಿಲು ತೆರೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಂಬಿಕಾ ಕಾಲೇಜಿನಲ್ಲಿ ಪದವಿ ಓದುವ ವಿದ್ಯಾರ್ಥಿಗಳಿಗೆ ಮೊದಲ ವರ್ಷದಿಂದ ತೊಡಗಿ ಅಂತಿಮ ವರ್ಷದವರೆಗೂ ಎಸ್‌ಡಿಎ, ಎಫ್‌ಡಿಎ, ಪಿಡಿಒದಂತಹ ಪರೀಕ್ಷೆಗಳಿಗೆ ನಿರಂತರ ತರಬೇತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸರ್ಕಾರಿ ಉದ್ಯೋಗಕ್ಕೆ ಕಳುಹಿಸುವ ಇರಾದೆ ಈ ಶಿಕ್ಷಣ ಸಂಸ್ಥೆಯದ್ದು.
ವಿಶೇಷ ಆಕರ್ಷಣೆಯಾಗಿ ಅನುಪಮ ಟಿವಿ:
ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುನ್ನಡೆಸುತ್ತಿರುವ ಅನುಪಮ ಟಿವಿ ಎಂಬ ಯೂಟ್ಯೂಬ್ ವಾಹಿನಿ ಇದೀಗ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಟಿವಿ ಪತ್ರಿಕೋದ್ಯಮದ ಅರಿವನ್ನು ಮೂಡಿಸುವ ನೆಲೆಯಲ್ಲಿ ಈ ವಾಹಿನಿಯನ್ನು ಆರಂಭಿಸಲಾಗಿದೆ. ಆಂಕರಿಂಗ್, ಕ್ಯಾಮರಾ ನಿರ್ವಹಣೆ, ವೀಡಿಯೋ ಎಡಿಟಿಂಗ್, ಸ್ಕ್ರಿಪ್ಟ್ ರೈಟಿಂಗ್, ವಾಯ್ಸ್ ಓವರ್ ಮೊದಲಾದ ವಿಷಯಗಳನ್ನು ಈ ಟಿವಿ ವಾಹಿನಿ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದೆ. ಈಗಾಗಲೇ ವಿಭಾಗದ ವಿದ್ಯಾರ್ಥಿಗಳು ಈ ವಾಹಿನಿಯ ಮೂಲಕ ಮನೆಮಾತಾಗುತ್ತಿದ್ದಾರೆ.
ಸುದರ್ಶನ ಮಾಸಪತ್ರಿಕೆ:
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಪತ್ರಿಕೋದ್ಯಮ ವಿಭಾಗ ಹೊರತರುತ್ತಿರುವ ಸುದರ್ಶನ ಎಂಬ ಹೆಸರಿನ ಮಾಸಪತ್ರಿಕೆ ವಿದ್ಯಾರ್ಥಿಗಳಿಗೆ ಬರವಣಿಗೆಯ ಕಲೆಯನ್ನು ಕಲಿಸಿಕೊಡುತ್ತಿದೆ. ಪತ್ರಿಕೊದ್ಯಮದಲ್ಲಿ ಉದ್ಯೋಗ ಕಂಡುಕೊಳ್ಳುವುದಕ್ಕೆ ಭಾಷೆಯ ಮೇಲಿನ ಹಿಡಿತದ ಅಗತ್ಯ ಇರುವುದರಿಂದ ಸ್ವತಃ ವಿಭಾಗದಿಂದಲೇ 32 ಪುಟಗಳ ಸುಂದರವಾದ ಮಾಸಪತ್ರಿಕೆಯನ್ನು ಹೊರತರಲಾಗುತ್ತಿದೆ. ಸುಮಾರು ಒಂದು ಸಾವಿರ ಪ್ರತಿಗಳ ಪ್ರಸಾರವನ್ನು ಈ ಮಾಸಪತ್ರಿಕೆ ಹೊಂದಿದೆ ಎಂಬುದು ಗಮನಾರ್ಹ.
ಅಭಿನವ ವಾರಪತ್ರಿಕೆ:
ವಿದ್ಯಾರ್ಥಿಗಳಲ್ಲಿ ವರದಿಗಾರಿಕೆ, ಬರವಣಿಗೆಯಂತಹ ಕಲೆಯನ್ನು ತುಂಬುವ ನೆಲೆಯಲ್ಲಿ, ಪುಟವಿನ್ಯಾಸದ ಕಲ್ಪನೆ ತರುವಲ್ಲಿ ಅಭಿನವ ವಾರಪತ್ರಿಕೆ ಕೆಲಸ ಮಾಡುತ್ತಿದೆ. ಪ್ರತಿವಾರ ವಿದ್ಯಾರ್ಥಿಗಳೇ ರೂಪಿಸುವ ಈ ಪತ್ರಿಕೆ ವಿದ್ಯಾರ್ಥಿಗಳಲ್ಲಿ ವೃತ್ತಿಪರತೆಯನ್ನು ಬೆಳೆಸುತ್ತಿದೆ.
ಭಾರತೀಯ ಕಾಲಗಣನೆ – ಪಂಚಾಂಗ ಪದ್ಧತಿ:
ಅಂಬಿಕಾ ಪದವಿಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಭಾರತೀಯ ಪಂಚಾಂಗ ಪದ್ಧತಿಯ ಅರಿವನ್ನು ಒಡಮೂಡಿಸಲಾಗುತ್ತಿದೆ. ಹಾಗಾಗಿ ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಭಾರತೀಯ ದಿನಾಂಕವನ್ನು ಗುರುತಿಸುವ, ವಿಶೇಷತೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮೂಡಿಬರುತ್ತಿದೆ. ಇದರೊಂದಿಗೆ ಭಗವದ್ಗೀತೆ ಪಠಣ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮದಂತಹ ಪಠಣಗಳು, ಯೋಗ ತರಬೇತಿಗಳು ಇಲ್ಲಿ ನಿರಂತರವಾಗಿ ಸಾಗಿಬರುತ್ತಿವೆ.
ಪುತ್ತೂರು ನಗರದಿಂದ ಕಾಲ್ನಡಿಗೆಯ ದೂರದಲ್ಲಿರುವ ಬಪ್ಪಳಿಗೆಯ ಪ್ರಶಾಂತ ವಾತಾವರಣದಲ್ಲಿ ಈ ಶಿಕ್ಷಣ ಸಂಸ್ಥೆ ತಲೆಎತ್ತಿ ನಿಂತಿದ್ದು, ಈ ಸಂಸ್ಥೆಯ ಗುಣಮಟ್ಟ, ಇಲ್ಲಿರುವ ಅನುಭವೀ ಶಿಕ್ಷಕ ವೃಂದ, ವಿದ್ಯಾರ್ಥಿಗಳಿಗಿರುವ ವಿವಿಧ ಸವಲತ್ತುಗಳು, ಗುಣಮಟ್ಟದ ಆಹಾರದ ಜತೆಗೆ ಉತ್ಕೃಷ್ಟ ಹಾಸ್ಟೆಲ್ ವ್ಯವಸ್ಥೆ, ಅತ್ಯುತ್ತಮ ಗ್ರಂಥಾಲಯವೇ ಮೊದಲಾದ ಅನೇಕ ಸಂಗತಿಗಳು ಸಂಸ್ಥೆಯ ವಿಶೇಷತೆಗಳೆನಿಸಿವೆ. ಹಾಗಾಗಿಯೇ ಅನೇಕ ವಿದ್ಯಾರ್ಥಿಗಳು ಅದಾಗಲೇ ಈ ಸಂಸ್ಥೆಗೆ ದಾಖಲಾತಿ ಬಯಸಿ ಕಾಲೇಜನ್ನು ಸಂಪರ್ಕಿಸುತ್ತಿದ್ದಾರೆ. ಕಾಲೇಜಿನಲ್ಲಿ ನಿಗದಿತವಾದ ಕೆಲವು ಅವಕಾಶಗಳಷ್ಟೇ ಇದ್ದು, ಆಸಕ್ತ ವಿದ್ಯಾರ್ಥಿಗಳು ತಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ : 9449102082 / 9448835488
ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ರಾಜ್ಯದ ಹೆಮ್ಮೆಯ ಶಿಕ್ಷಣ ಸಂಸ್ಥೆಗಳು
೧. ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ)
೨. ಅಂಬಿಕಾ ಪದವಿಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ
೩. ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯ, ಬಪ್ಪಳಿಗೆ
೪. ಅಂಬಿಕಾ ಡಿಗ್ರಿ ಕಾಲೇಜು, ಬಪ್ಪಳಿಗೆ
ಅಂಬಿಕಾ ಡಿಗ್ರಿ ಕಾಲೇಜಿನಲ್ಲ್ಲಿ ಲಭ್ಯ ಇರುವ ಕೋರ್ಸ್‌ಗಳು
ಬಿ.ಎ. / ಬಿ.ಎಸ್ಸಿ. /ಬಿ.ಕಾಂ. ಜನರಲ್ / ಬಿ.ಕಾಂ ಇಂಟಗ್ರೇಟೆಡ್ (ಸಿಎ/ಐಬಿಪಿಎಸ್)