ಹೆಣ್ಣು ಅಂದ್ರೆ ಸೌಂದರ್ಯದ ಗಣಿ ಅಂತ ಅರಿತವರು ಕವಿರತ್ನರು ಹಾಡಿ ಹೊಗಳಿದ್ದಾರೆ. ಇದು ನಿಜವೂ ಹೌದು.. ಹೆಣ್ಣಿನ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸೋದು ಅಂದ್ರೆ ಆಕೆಯ ಉಡುಗೆ ತೊಡುಗೆ. ಬಟ್ಟೆಯ ವಿಚಾರ ಒದು ಕಡೆಯಾದ್ರೆ ಆಕೆ ತೊಡುವ ಆಭರಣಗಳು ಕೂಡ ಅಷ್ಟೆ ಮಹತ್ವ ಪಡೆಯುತ್ತದೆ. ಸಣ್ಣ ನೋಸ್ ಪಿನ್ನಿಂದ ಹಿಡಿದು ದೊಡ್ಡ ದೊಡ್ಡ ಕಿವಿಯೋಲೆ, ಸರಗಳು ಕೂಡ ಅಂದ ಚಂದಕ್ಕೆ ಭೂಷಣವೇ ಸರಿ.

ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಆಭರಣಗಳಲ್ಲಿ ತುಂಬಾನೆ ಟ್ರೆಂಡಿ ಕಲೆಕ್ಷನ್ಗಳು ಸದ್ದು ಮಾಡ್ತಾ ಇದೆ.. ಒಂದು ಕಾಲದಲ್ಲಿ ಮೂಗುಬೊಟ್ಟು ಅಂದ್ರೆ ಮೂಗು ಮುರಿಯುತ್ತಿದ್ದ ಯುವತಿಯರು ಈಗ ಓಲ್ಡ್ ಇಸ್ ಗೋಲ್ಡ್ ಎನ್ನುವಂತೆ ಮೂಗು ಚುಚ್ಚಿಸಿಕೊಳ್ಳುತ್ತಿದ್ದಾರೆ. ಚಿನ್ನ, ಬೆಳ್ಳಿ, ಮುತ್ತು, ರತ್ನ, ವಜ್ರಗಳಿಗೆ ಸೀಮಿತವಾಗಿದ್ದ ಮೂಗುಬೊಟ್ಟು ಗಾಜು, ತಾಮ್ರ, ಕಂಚು ಹಾಗೂ ಮರದ ತುಂಡಿನಿಂದಲೂ ತಯಾರಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಕಮಾಲ್ ಮಾಡ್ತಾ ಇದೆ. ಹೆಣ್ಣಿನ ಮುಖದಲ್ಲಿ ನಕ್ಷತ್ರದಂತೆ ಮಿನುಗುವ ಈ ನೋಸ್ ಪಿನ್ಗೆ ಅದರದ್ದೆ ಆದ ಮಹತ್ವವನ್ನ ಹೊಂದಿದೆ. ಇದಕ್ಕೆ ಈ ಮೂಗುಬೊಟ್ಟಿಗೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋದು. ಆದರೆ ಸಾಂಪ್ರದಾಯಿಕ ಭಾರತೀಯ ಶಾಸ್ತ್ರದಲ್ಲಿ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಮೂಗುತ್ತಿಗೆ ಹೆಚ್ಚಿನ ಮಹತ್ವವಿದೆ. ಮೂಗು ಚುಚ್ಚುವುದರ ಬಗ್ಗೆ, ಮೂಗುತಿಯನ್ನು ಧರಿಸುವ ವಿಧಾನವನ್ನು ವಿಶೇಷ ಎಂದು ಪರಿಗಣಿಸಲಾಗಿದೆ. ಕೆಲವು ಸಮುದಾಯಗಳಲ್ಲಿ, ಮಹಿಳೆ ಮೂಗು ಚುಚ್ಚುವುದು ಅವರ ನಂಬಿಕೆಗಳ ಭಾಗವಾಗಿದೆ. ವೇದಗಳ ಪ್ರಕಾರ, ಎಡ ಮೂಗಿನ ಹೊಳ್ಳೆಯನ್ನು ಚುಚ್ಚುವುದು ಮಹಿಳೆಗೆ ಸೂಕ್ತ ಎನ್ನುವ ನಂಬಿಕೆಯೂ ಇದೆ.

ಮೂಗುತಿಯ ಮಹತ್ವ
ಹಿಂದೂ ಪುರಾಣಗಳಲ್ಲಿ ಚಿನ್ನವು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಹೊಂದಿದೆ ಅನ್ನೋದು ಹಿರಿಯರ ನಂಬಿಕೆ, ಸಾಮಾನ್ಯವಾಗಿ ಎಡಮೂಗಿನ ಹೊಳೆಗೆ ಚುಚ್ಚುವುದು ಹೆಚ್ಚು. ಯಾಕೆಂದರೆ ಮೂಗಿನ ಎಡಭಾಗವು ಮಹಿಳೆಯ ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದೆ. ಆಯುರ್ವೇದ ಗ್ರಂಥಗಳ ಪ್ರಕಾರ, ಮೂಗಿನ ಎಡಭಾಗವನ್ನು ಚುಚ್ಚಿದಾಗ, ಅದು ಗರ್ಭಾಶಯ ಮತ್ತು ಇತರ ಸಂತಾನೋತ್ಪತ್ತಿ ಅಂಗಗಳಿಗೆ ಸಂಪರ್ಕ ಹೊಂದಿದ ನರಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಗಮನಾರ್ಹವಾಗಿ ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮಗುವಿನ ಜನನದ ಸಮಯದಲ್ಲಿ ಹೆರಿಗೆ ನೋವನ್ನು ಕೂಡಾ ಕಡಿಮೆ ಮಾಡುತ್ತದೆ ಎನ್ನುವ ನಂಬಿಕೆ. ಹೀಗಾಗಿ ಮನೆಯಲ್ಲಿ ಹಿರಿಯರಿದ್ದರೆ ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸಲೇ ಬೇಕೆಂದು ಹಠಕ್ಕೆ ನಿಲ್ಲುತ್ತಾರೆ. ಕೊನೆ ಪಕ್ಷ ಮದುವೆ ಸಮಯದಲ್ಲಾದರೂ ಮೂಗು ಚುಚ್ಚಿಸಿ ಸಮಾಧಾನ ಪಡುತ್ತಾರೆ.

ಈಗ ಟ್ರೆಂಡಿ ಮೂಗುಬೊಟ್ಟು ಕಲೆಕ್ಷನ್ ಬಗ್ಗೆ ನೋಡೋಣ..
ಗೋಲ್ಡ್ ಸ್ಟಡ್ ನೋಸ್ಪಿನ್: ಚಿನ್ನಕ್ಕೆ ಅದರದ್ದೆ ಆದ ಮಹತ್ವ ಇದೆ. ಹೆಚ್ಚಿನ ಹೆಣ್ಣು ಮಕ್ಕಳು ಚಿನ್ನಾಭರಣ ಪ್ರಿಯರಲ್ಲದೆ ಇದ್ದರೂ ಮೂಗುತ್ತಿ ಮಾತ್ರ ಚಿನ್ನದ್ದೆ ಧರಿಸ್ತಾರೆ. ಗೋಲ್ಡ್ನಲ್ಲಿ ಬರೋ ಸ್ಟಡ್ ಮೂಗುಬೊಟ್ಟು ಸಾಮಾನ್ಯವಾಗಿ ಎಲ್ಲರ ಮುಖಕ್ಕೂ ಸೂಟ್ ಆಗುತ್ತದೆ. ಇದು ನೋಡಲು ದುಂಡಾಗಿದ್ದು, ಹಾರ್ಟ್ ಶೇಪ್ನಲ್ಲಿರುತ್ತದೆ.
ಮುತ್ತಿನ ಮೂಗುಬೊಟ್ಟು: ಮಹಿಳೆಯರಿಗೆ ಮುತ್ತಿನ ಮೂಗುಬೊಟ್ಟು ಎಂದರೆ ಬಹಳ ಇಷ್ಟ. ನೀವು ವಿಭಿನ್ನವಾಗಿ ಕಾಣಿಸಿಕೊಳ್ಳಲು ಬಯಸುತ್ತಿದ್ದರೆ, ಚಿನ್ನ ಹಾಗೂ ಬೆಳ್ಳಿಯ ಮೂಗುತಿ ಬೇಡವಾದರೆ ಈ ಮುತ್ತಿನ ಮೂಗುತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಡಿಸೈನರ್ ಸ್ಟಡ್ ಡೈಮಂಡ್ ನೋಸ್ ಪಿನ್:
ಇದು ಡೈಮೆಂಡ್ನಿಂದ ವಿನ್ಯಾಸಗೊಳಿಸಿದ ಮೂಗುಬೊಟ್ಟಾಗಿದೆ. ಪಲ್ಸ್ ಮೂಗುಬೊಟ್ಟು ಸಾಮಾನ್ಯವಾಗಿ ಎಲ್ಲರ ಮುಖಕ್ಕೆ ಸೂಟ್ ಆಗುತ್ತದೆ. ನಿಮಗೆ ಯಾವ ರೀತಿಯ ಮೂಗುಬೊಟ್ಟು ಧರಿಸಬೇಕು ಎಂಬ ಅನುಮಾನ ಇದ್ದರೆ, ಈ ಮೂಗುಬೊಟ್ಟನ್ನು ಖರೀದಿಸಬಹುದು.

ಬೆಳ್ಳಿಯ ನೋಸ್ ಪಿನ್ :
ಇತ್ತೀಚೆಗೆ ತುಂಬಾ ಟ್ರೆಂಡ್ ಕ್ರಿಯೆಟ್ ಮಾಡ್ತಾ ಇರೋದು ಅಂದ್ರೆ ಅದು ಈ ಬೆಳ್ಳಿಯ ನೋಸ್ ಪಿನ್.. ಹಲವು ಡಿಸೈನ್ಗಳಲ್ಲಿ ಬೆಳ್ಳಿಯ ನೋಸ್ ಪಿನ್ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ಸುಂದರವಾದ ಮೂಗುತ್ತಿಗೆ ಮಹಿಳಾ ಮಣಿಯರು ಆಯ್ಕೆ ಮಾಡಿಕೊಳ್ಳೊದೇ ಈ ಬೆಳ್ಳಿಯ ಮೂಗುತ್ತಿಯನ್ನ..
ವೈಡೂರ್ಯದ ಸ್ಟಡ್ ನೋಸ್ ಪಿನ್:
ಇದು ಕ್ಲಾಸಿ ಲುಕ್ ನೀಡುವ ಮೂಗುಬೊಟ್ಟಾಗಿದ್ದು, ಯಾವುದೇ ಸಮಾರಂಭಗಳು ಇದ್ದ ಸಂದರ್ಭದಲ್ಲಿ ವೇರ್ ಮಾಡಬಹುದಾಗಿದೆ. ಅನೇಕ ರತ್ನದ ಕಲ್ಲುಗಳನ್ನು ಬಳಸಿ ದೊಡ್ಡದಾಗಿ ತಯಾರಿಸಲಾಗಿರುವ ಈ ಮೂಗುತ್ತಿ ಹದಿಹರೆಯದ ಹುಡುಗಿರ ಮೆಚ್ಚಿನ ಡಿಸೈನ್ ಆಗಿದೆ. ಇದನ್ನ ವೇರ್ ಮಾಡಿದ್ರೆ ಬೋಲ್ಡ್ ಲುಕ್ ನೀಡುತ್ತದೆ.
ಹಿಂದೆಲ್ಲ ಒಂದು ಸ್ಟೋನ್, ಫ್ಲೇನ್, ಹೂವಿನ ಆಕಾರದಲ್ಲಿ ಮಾತ್ರ ಮೂಗುಬೊಟ್ಟುಗಳಿತ್ತು. ಆ ಬಳಿಕ ಒಮ್ಮೆ ಸಾನಿಯ ಮೂಗುತ್ತಿ ಭಾರಿ ಪೇಮಸ್ ಆಯ್ತು, ಇದು ಈಗಲೂ ಚಾಲ್ತಿಯಲ್ಲಿದೆ.. ಆದ್ರೆ ಈ ಫ್ಯಾಷನ್ ಫಾಲೋ ಮಾಡೋ ಹೆಂಗಳೆಯರು ವಿನೂತನ ಡಿಸೈನ್ನ ಮೂಗುತ್ತಿಯತ್ತ ಮುಖ ಮಾಡ್ತಾ ಇದ್ದಾರೆ. ಹೃದಯದಾಕಾರದ, ಅರ್ಧ ಚಂದ್ರ, ಸೂರ್ಯಕಾರ, ಹಲವು ಅಕ್ಷರ, ಮನೆಯ ಚಿತ್ರ, ಜನ್ಮರಾಶಿ ಚಿಹ್ನೆ, ಮಿಂಚಿನ ಆಕೃತಿ, ಬೀಗ, ಕೀಲಿಕೈ, ಹೀಗೆ ಊಹಿಸಲೂ ಸಾಧ್ಯವಿಲ್ಲದ ಆಯ್ಕೆಗಳ ಮೂಗುತ್ತಿಯನ್ನ ಧರಿಸುತ್ತಾರೆ. ಇವೆಲ್ಲವೂ ಕ್ಲಿಪ್ ಅಥವಾ ಹುಕ್ ರೂಪದಲ್ಲೂ ಸಿಗುತ್ತವೆ ಹಾಗಾಗಿ ಹಾಕೋದಿಕ್ಕೂ ಸುಲಭವಾಗಿದೆ.
https://shorturl.at/bKeqz
https://shorturl.at/wP4OI
https://shorturl.at/Jc1JP
https://shorturl.at/EoZ0A