ಈ ಜಗತ್ತಿನಲ್ಲಿ ಸೊಬಗಿಗೆ ಮಾರುಹೋಗದವರೇ ಇಲ್ಲ ಎನ್ನುವಂತೆ ಎಲ್ಲರಲ್ಲಿಯೂ ತಾವು ಚೆನ್ನಾಗಿ ಕಾಣಬೇಕು ಎನ್ನುವ ಹಂಬಲ ಇದ್ದೇ ಇರುತ್ತೆ. ಆಕರ್ಷಕ ಮತ್ತು ಸುಂದರ ನೋಟಕ್ಕಾಗಿ, ಬಟ್ಟೆಗಳ ಫ್ಯಾಷನ್ ಜೊತೆಗೆ, ಫ್ಯಾಷನ್ ಬಿಡಿಭಾಗಗಳನ್ನು ಆಯ್ಕೆ ಮಾಡುವುದು ಮುಖ್ಯ. ಹ್ಯಾಂಡ್ ಬ್ಯಾಗ್ ಗಳು ಬಹುತೇಕ ಎಲ್ಲಾ ಮಹಿಳೆಯರು ಒಯ್ಯುತ್ತಾರೆ. ಆದರೆ ಈ ಬ್ಯಾಗ್ ಬಟ್ಟೆಗೆ ಹೊಂದಿಕೆಯಾಗದಿದ್ದರೆ, ಫ್ಯಾಷನ್ ನಲ್ಲಿ ಕೊಂಚ ಏರುಪೇರಾಗುತ್ತದೆ.

ಎಲ್ಲಾದರೂ ಹೊರಡುವಾಗ ಹುಡುಗಿಯರ ಬೆಡಗು-ಬಿನ್ನಾಣದ ಉಡುಗೆಗೆ ಫೈನಲ್ ಟಚ್ ನೀಡುವುದೇ ಟ್ರೆಂಡಿ ಹ್ಯಾಂಡ್ ಬ್ಯಾಗ್ಸ್. ಇದು ನಿಮ್ಮ ಡ್ರೆಸ್ಸಿಂಗ್ ಸ್ಟೈಲ್‌ನ ಒಂದು ಮುಖ್ಯ ಭಾಗವೂ ಹೌದು. ಯಾವ ಡ್ರೆಸ್‌ಗೆ ಯಾವ ರೀತಿಯ ಹ್ಯಾಂಡ್ ಬ್ಯಾಗ್ ಧರಿಸುತ್ತೇವೆ ಅನ್ನೋದು ಕೂಡ ನೋಡೋರಿಗೆ ಮ್ಯಾಟರ್ ಆಗುತ್ತದೆ.

ಹ್ಯಾಂಡ್ ಬ್ಯಾಗ್‌ಗಳಿಂದ ಎರಡು ರೀತಿಯ ಬೆನಿಫಿಟ್‌ಗಳಿವೆ. ಒಂದು ಇದು ಫ್ಯಾಶನ್ ಲುಕ್ ನೀಡಿದರೆ ಇನ್ನೊಂದು ಮುಖ್ಯವಾಗಿರುವ ಸಣ್ಣ ಪುಟ್ಟ ಮೇಕಪ್ ಐಟಂಗಳನ್ನ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಹ್ಯಾಂಡ್ ಬ್ಯಾಗ್ ಧರಿಸುವಾಗ ಅನುಸರಿಸಬೇಕಾದ ಟಿಪ್ಸ್
- ನೀವು ತುಂಬಾ ಹೆವಿ ಸ್ಟೋನ್ ವರ್ಕ್ನ ಬಟ್ಟೆಗಳನ್ನು ಧರಿಸುವಾಗ ಚಿಕ್ಕದಾದ ಹಾಗೂ ಸಿಂಪಲ್ ಹ್ಯಾಂಡ್ ಬ್ಯಾಗ್‌ಗಳನ್ನು ವೇರ್ ಮಾಡಿ
- ಕಡು ಬಣ್ಣದ ಉಡುಪುಗಳಿಗೆ ಸಾಧ್ಯವಾದಷ್ಟು ತಿಳಿ ಬಣ್ಣದ ಬ್ಯಾಗ್‌ಗಳನ್ನು ಧರಿಸಿ
- ನೀವು ಧರಿಸಿರುವ ಬಟ್ಟೆಯ ಬಣ್ಣ ಹಾಗೂ ಬ್ಯಾಗ್‌ನ ಬಣ್ಣ ಯಾವತ್ತೂ ಒಂದೇ ಆಗಿರಬಾರದು
- ಸಿಂಪಲ್ ಡ್ರೆಸ್‌ಗಳಿಗೆ ಹೆಚ್ಚು ಡಿಸೈನ್ ಅಥವಾ ಸ್ಟೋನ್ ವರ್ಕ್ ಇರುವ ಬ್ಯಾಗ್‌ಗಳನ್ನು ಧರಿಸಿ
- ಪಾರ್ಟಿ, ಇವೆಂಟ್, ಮದುವೆ ಸಮಾರಂಭಗಳಿಗೆ ಆದಷ್ಟು ಚಿಕ್ಕ ಬ್ಯಾಗ್‌ಗಳನ್ನು ಬಳಸಿ
- ಕ್ಯಾಶುವಲ್ ಫಾರ್ಮಲ್‌ಗಳಿಗೆ ಸಿಂಪಲ್ ಆಗಿರುವ ಬ್ಯಾಗ್ ಹಾಗೂ ಪಾರ್ಟಿವೇರ್‌ಗಳಿಗೆ ಮಾಡರ್ನ್ ಹಾಗೂ ಗ್ಯಾಂಡ್ ಬ್ಯಾಗ್‌ಗಳನ್ನು ಧರಿಸಿ
- ನೀವು ಧರಿಸಿರುವ ಉಡುಪಿಗೆ ನಿಮ್ಮ ಹ್ಯಾಂಡ್ ಬ್ಯಾಗ್ ಮ್ಯಾಚ್ ಆಗುತ್ತದೆಯೇ ಎಂದು ಮೊದಲು ಗಮನಿಸಿ

- FOR MORE WOMEN HAND BAGS CLICK HERE 👇🏻👇🏻👇🏻👇🏻
https://shorturl.at/mZK59
https://shorturl.at/s0iA0
https://shorturl.at/N2Ogx
https://shorturl.at/uLERS
https://shorturl.at/FJmit
https://shorturl.at/n2Z7n