ಪುತ್ತೂರು: ಸಂಪ್ಯ ಅಕ್ಷಯ್ ಕಾಲೇಜು ಬಳಿ ಸ್ಕೂಟರ್‌ವೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಪರಾರಿಯಾದ ಘಟನೆ ಮೇ 11ರ ರಾತ್ರಿ ನಡೆದಿದ್ದು, ಘಟನೆಯಿಂದ ಸ್ಕೂಟರ್ ಸವಾರ ತೀವ್ರ ಗಾಯಗೊಂಡಿದ್ದಾರೆ.
ಕೆದಿಲ ನಿವಾಸಿಯೊಬ್ಬರು ಪುತ್ತೂರು ಕಡೆಗೆ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಅಕ್ಷಯ್ ಕಾಲೇಜು ಬಳಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದೆ.
ಘಟನೆಯಿಂದ ಗಾಯಗೊಂಡ ಸ್ಕೂಟರ್ ಸವಾರನನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಸಂಪ್ಯ ಪೊಲೀಸರು ವಾಹನದ ಮಾಹಿತಿಗಾಗಿ ಸಿ ಸಿ ಕ್ಯಾಮರ ಮೂಲಕ ಪತ್ತೆ ಮಾಡುವಲ್ಲಿ ಪ್ರಯತ್ನಿಸುತ್ತದ್ದಾರೆ.