ನಿಡ್ಪಳ್ಳಿ :ಇಲ್ಲಿನ ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಸಮಿತಿ ಸಭೆ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಅಧ್ಯಕ್ಷತೆಯಲ್ಲಿ ಮೆ.26 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಮಾಡಿದ ಪ್ರಮುಖ ನಿರ್ಣಯಗಳು;
ಚೂರಿಪದವು ರಸ್ತೆ ಬದಿ ಗುಡ್ಡ ಕುಸಿತವಾಗಿದ್ದು ಸ್ಥಳಕ್ಕೆ ಪಿಡಿಒ ಮತ್ತು ಅಧ್ಯಕ್ಷರು ಭೇಟಿ ನೀಡಿ ಪರಿಶೀಲಿಸಿದ್ದು ಬಿದ್ದ ಮಣ್ಣನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಕುಡ್ಚಿಲ ಪಳಂಬೆ ರಸ್ತೆ ಬದಿ ಗುಡ್ಡ ಕುಸಿತವಾದ ಸ್ಥಳಕ್ಕೆ ಅಧ್ಯಕ್ಷರು ಮತ್ತು ಪಿಡಿಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಿದ್ದ ಮಣ್ಣನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಮಾಯಿಲಕೋಟೆ ಬಾಬುರವರ ಮನೆಯ ಹಿಂಬದಿ ಗುಡ್ಡ ಕುಸಿದಿದ್ದು ಪಿಡಿಒ ಮತ್ತು ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿ ಬಿದ್ದ ಮಣ್ಣನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಉಳಯ ಮಾಯಿಲಕೋಟೆ ರಸ್ತೆ ಬದಿ ವಿದ್ಯುತ್ ಲೈನ್ ಗೆ ತಾಗುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಯ ಗಮನಕ್ಕೆ ತರಲು ನಿರ್ಣಯಿಸಲಾಯಿತು.
ದೇವಸ್ಯ ಹುಕ್ರರವರ ಮನೆಯ ಹಿಂಬದಿ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ಹುಕ್ರರವರ ಮನೆಯ ಹಿಂಬದಿ ಗುಡ್ಡದ ಮೇಲೆ ಇರುವ ಅಪಾಯಕಾರಿ ಮರ ತೆರವು ಗೊಳಿಸುವ ಬಗ್ಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತರಲು ನಿರ್ಣಯಿಸಲಾಯಿತು. ಬಿದ್ದ ಮಣ್ಣನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಗಮನಕ್ಕೆ ತರಲು ನಿರ್ಣಯಿಸಲಾಯಿತು.
ರೆಂಜ ಮುಡ್ಪಿನಡ್ಕ ಲೋಕೋಪಯೋಗಿ ಇಲಾಖೆಯ ರಸ್ತೆ ಬದಿ ಮಣ್ಣು ಕುಸಿದ ಸ್ಥಳಕ್ಕೆ ಅಧ್ಯಕ್ಷರು ಪಿಡಿಒ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಿದ್ದ ಮಣ್ಣನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲು ನಿರ್ಣಯಿಸಲಾಯಿತು.

ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಗಣೇಶ್ ನಾಯಕ್ ನೊಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಅರಣ್ಯಾಧಿಕಾರಿ ಮದನ್, ಮೆಸ್ಕಾಂ ಜೆ.ಇ ಪುತ್ತು, ಪಂಚಾಯತ್ ಕಾರ್ಯದರ್ಶಿ ಶಿವರಾಮ, ಪಂಚಾಯತ್ ಸದಸ್ಯ ಅವಿನಾಶ್ ರೈ, ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಕಾರ್ಯಕರ್ತೆ ಕುಸುಮಾವತಿ, ಸಿಎಚ್ ಒ ಲಕ್ಷ್ಮೀ, ಗ್ರಾಮ ಆಡಳಿತ ಕಚೇರಿ ಸಹಾಯಕಿ ಜಯಶ್ರೀ, ಎಂ.ಬಿ.ಕೆ ಭವ್ಯಾ ಮತ್ತೀತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು. ಪಂಚಾಯತ್ ಸಿಬ್ಬಂದಿಗಳಾದ ರೇವತಿ, ವಿನೀತ್ ಕುಮಾರ್, ಜಯಕುಮಾರಿ, ಸಂಶೀನಾ ಸಹಕರಿಸಿದರು.