ಪುತ್ತೂರು: ಪುತ್ತೂರು ಬಪ್ಪಳಿಗೆ ಶ್ರೀ ಶಾರದಾಂಭ ಸೇವಾ ಸಮಾಜ ಸುಧಾರಣ ಸಂಘದಿಂದ 38ನೇ ವಾರ್ಷಿಕ ಮಹಾಸಭೆ ಮತ್ತು ಸಮಾಜದ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ ಮೇ.25ರಂದು ಸಂಘದ ಬಪ್ಪಳಿಗೆ “ಶ್ರೀ ಶಾರದಾ ಭವನ” ದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ರಾಜೇಶ್ ನಾಯಕ್ ರವರ ಅಧ್ಯಕ್ಷತೆ ಯಲ್ಲಿ ಜರಗಿದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ಪುರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಕರ್ನಾಟಕ ಉಚ್ಛ ನ್ಯಾಯಾಲಯದ ಯುವ ನ್ಯಾಯವಾದಿ ಹರೀಶ್ ಚಂದ್ರ ಮವ್ವಾರ್ , ಆರ್ಯ ತಂಡದ ಪ್ರಮುಖರಾದ ಗೋಪಾಲಕೃಷ್ಣ ನಾಯಕ್ ,ಪುತ್ತೂರು ಎಸ್. ಎಸ್. ಆರ್. ಸಿ. ತಂಡದ ಅಧ್ಯಕ್ಷ ರವೀಂದ್ರನಾಥ ಪಡೀಲ್ , ಗೌರವ ಅಧ್ಯಕ್ಷ ಪದ್ಮನಾಭ ನಾಯ್ಕ್ ಪಡೀಲ್, ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಕಜೆ, ಕೋಶಾಧಿಕಾರಿ ಚಿತ್ರಲೇಖ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಕಜೆ 2024 ನೇ ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ಚಿತ್ರಲೇಖಾ 2024 ನೇ ಸಾಲಿನ ಲೆಕ್ಕಪತ್ರವನ್ನುಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷ ರಾಜೇಶ್ ನಾಯಕ್ ಮಾತನಾಡಿ, ಸಮಾಜದ ಅನೇಕ ಜನಪರ ಚಟುವಟಿಕೆ ಗಳಲ್ಲಿ ಪುಸ್ತಕ ವಿತರಣ ಕಾರ್ಯಕ್ರಮವು ಒಂದು ಪ್ರತಿ ವರ್ಷ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಈ ವರ್ಷ ಸುಮಾರು 100 ಕ್ಕಿಂತಲೂ ಮಿಕ್ಕಿ ಸಮಾಜದ ಮಕ್ಕಳು ಪ್ರಯೋಜನ ಪಡೆಯುತಿದ್ದಾರೆ. ಸಮಾಜ ಭಾಂದವರ ಸಹಕಾರದಿಂದ ಸಂಘವು ಅತ್ಯುತ್ತಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಸಮಾಜ ಭಾಂದವರು ಇನ್ನು ಹೆಚ್ಚಿನ ಸಂಖ್ಯೆ ಯಲ್ಲಿ ನಮ್ಮ ಸಂಘದ ಸದಸ್ಯತ್ವ ಪಡೆದು ಸಂಘದ ಬೆಳವಣಿಗೆ ಗೆ ಕೈಜೋಡಿಸಬೇಕೆಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಮಾತನಾಡಿ ಶುಭ ಹಾರೈಸಿದರು. ಜೊತೆ ಕಾರ್ಯದರ್ಶಿ ರವಿಕುಮಾರ್ ರವರು ಪ್ರಾಸ್ತಾವಿಕ ಭಾಷಣಗೈದರು. ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಮಹಾಬಲ ಕೃಷ್ಣನಗರ, ಶೋಭ ಬಾಲಕೃಷ್ಣ, ಶಾರದಾ, ಕೇಶವ ನಾಯಕ್, ಕೃಷ್ಣ ಮಾಡವು, ನಿರ್ದೇಶಕರಾದ ಸಂತೋಷ ಪಡ್ಡಾಯೂರು, ಶಶಿಶೇಖರ ಪಾಪೆತಡ್ಕ, ನಿತೀಶ್ ನಾಯಕ್ ಪಡೀಲು, ಅರವಿಂದ ಸಾಮೆತಡ್ಕ , ದೀಪಕ್ M.D ಮೊಟ್ಟೆತಡ್ಕ ಸಹಕರಿಸಿದರು.
ಧನ್ಯಶ್ರೀ ಪ್ರಾರ್ಥಿಸಿ,ಸಂಘದ ಉಪಾಧ್ಯಕ್ಷ ವಸಂತ ಕುಮಾರ್ ಮುಕ್ರಂಪಾಡಿ ಸ್ವಾಗತಿಸಿದರು. ಜಯಪ್ರಸಾದ ಚೆಲ್ಯಡ್ಕ ವಂದಿಸಿದರು.ಪುರುಷೋತಮ ನಾಯ್ಕ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.