ಕೊಯಿಲ: ಸೋಮವಾರ ಸಾಯಂಕಾಲ ಭಾರಿ ಗಾಳಿ ಮಳೆಗೆ ಕೊಯಿಲ ಗ್ರಾಮದ ನೂಜಿ ನಿವಾಸಿ ವೇದಾವತಿ ದಾಸ್ ಎಂಬುವವರ ಮನೆಗೆ ಹಾನಿಯಾಗಿದೆ.

ಮನೆ ಛಾವಣಿಗೆ ಅಳವಡಿಸಲಾದ ಶೀಟ್ ಗಳು ಬಾಗಶಃ ಹಾನಿಯಾಗಿದ್ದು, ಗೋಡೆ, ವಿದ್ಯುತ್ ಪರಿಕರಗಳಿಗೆ, ವಯರಿಂಗ್ ಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಕೊಯಿಲ ಗ್ರಾಮಕರಣಿಕ ಶೇಷಾದ್ರಿ, ಗ್ರಾಮ ಸಹಾಯಕ ಜಯಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.