ಬನ್ನೂರು ಚರ್ಚ್ ನಲ್ಲಿ ವಾರ್ಷಿಕ ಹಬ್ಬ-13 ದಿನಗಳ ವಿಶೇಷ ಪ್ರಾರ್ಥನೆ

0

ಪುತ್ತೂರು: ಪವಾಡಪುರುಷ ಸಂತರಾದ ಸಂತ ಅಂತೋನಿಯವರು ಜೂ.13ರಂದು ಇಹಲೋಕವನ್ನು ತ್ಯಜಿಸಿ ಸ್ವರ್ಗಕ್ಕೇರಿದ ದಿನವನ್ನು ಸಂತ ಅಂತೋನಿ ಚರ್ಚ್ ನಲ್ಲಿ ಪ್ರತಿ ವರ್ಷ ವಾರ್ಷಿಕ ಹಬ್ಬವನ್ನಾಗಿ ಆಚರಿಸಲಾಗುತ್ತದೆ.ಆ ಪ್ರಯುಕ್ತ ಮೇ.31ರಿಂದ ಜೂ. 12ರ ತನಕ 13 ದಿನಗಳ ವಿಶೇಷ ಪ್ರಾರ್ಥನೆ (ನವೇನಾ)ಯು ಪ್ರಾರಂಭಗೊಳ್ಳುತ್ತಿದೆ. ಭಕ್ತಾದಿಗಳು ಆಗಮಿಸಿ ತಮ್ಮ ಬೇಡಿಕೆ, ಹರಕೆಗಳನ್ನು ಪವಾಡಪುರುಷ ಸಂತ ಅಂತೋನಿಯವರ ಮೂಲಕ ದೇವರಿಗೆ ಸಮರ್ಪಿಸಿ ವಿಶೇಷ ವರ ಪಡೆದುಕೊಳ್ಳಬಹುದು. ಜೆಪ್ಪು ಫಾತಿಮಾ ರಿಟ್ರೀಟ್ ಹೌಸ್ ನ ವಂ|ಎಡ್ವರ್ಡ್ ರೊಡ್ರಿಗಸ್ ರವರು ಧ್ವಜಾರೋಹಣವನ್ನು ನೆರವೇರಿಸಿ, ದಿವ್ಯ ಬಲಿಪೂಜೆ ನೆರವೇರಿಸಿ ಚಾಲನೆ ನೀಡಿದರು ಎಂದು ಚರ್ಚ್ ಧರ್ಮಗುರು ವಂ|ಬಾಲ್ತಜಾರ್ ಪಿಂಟೊ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ, 21 ಆಯೋಗಗಳ ಸಂಚಾಲಕ ಜೆರಿ ಪಾಯಿಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here