ವಿಟ್ಲ: ಬಂಟ್ವಾಳ ತಾಲೂಕು ಪೆರುವಾಯಿ ನಿವಾಸಿ ಯತೀಶ ಎಂಬವರ ʻʻಯತೀಶ್ ಪೆರುವಾಯಿʼʼ ಎಂಬ ಹೆಸರಿನ ಪೇಸ್ ಬುಕ್ ಖಾತೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ಮೂರು ಪೋಸ್ಟ್ ಗಳನ್ನು ರವಾನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಪೋಸ್ಟ್ ಗಳಿಂದಾಗಿ ವಿಭಿನ್ನ ಸಮುದಾಯಗಳ ನಡುವೆ ವೈಮನಸ್ಸು ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಯತೀಶ್ ಪೆರುವಾಯಿರವರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Home ಇತ್ತೀಚಿನ ಸುದ್ದಿಗಳು ವಿಟ್ಲ: ಪೇಸ್ ಬುಕ್ ಖಾತೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ಪೋಸ್ಟ್ – ಪ್ರಕರಣ ದಾಖಲು