ಪುತ್ತೂರು ಪ್ರಶಾಂತ್ ಮಹಾಲ್ ನಲ್ಲಿ ಸವಣೂರು ಕೆ ಸೀತಾರಾಮ ರೈ ಅವರ 78ನೇ ಹುಟ್ಟುಹಬ್ಬ ಆಚರಣೆ

0

ಪುತ್ತೂರು: ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈಯವರ 78ನೇ ಹುಟ್ಟು ಹಬ್ಬ ಆಚರಣೆಯನ್ನು ಪುತ್ತೂರು ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ನಲ್ಲಿ ಜೂ.9 ರಂದು ಆದರ್ಶ ವಿವಿಧೊದ್ದೇಶ ಸಹಕಾರಿ ಸಂಘ ಮತ್ತು ಪ್ರಶಾಂತ್ ಮಹಲ್ ನ ಕಚೇರಿ ಸಿಬ್ಬಂದಿಗಳು ಆಚರಿಸಿದರು.

ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಂತ ಜಾಲಾಡಿ, ಎಜಿಎಮ್ ಸುನಾದ ಮತ್ತು ಸಿಬ್ಬಂದಿಗಳು ಹಾಗು ಪ್ರಶಾಂತ್ ಮಹಲ್ ನ ಸಿಬ್ಬಂದಿಗಳು ಜೊತೆಯಾಗಿ ಸೀತಾರಾಮ ರೈ ಅವರನ್ನು ಅಭಿನಂದಿಸಿದರು. ಸೀತಾರಾಮ ರೈ ಅವರು ಕೇಕ್ ಕತ್ತರಿಸಿ ಸಿಬ್ಬಂದಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿದರು.

LEAVE A REPLY

Please enter your comment!
Please enter your name here