ಪುತ್ತೂರು: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಪುತ್ತೂರಿನ ಉದ್ಯಮಿ ದಿನೇಶ್ ರೈ ಮೊಡಪ್ಪಾಡಿಮೂಲೆ ಅವರು 75 ಕೆ.ಜಿ.ಯ ಗಂಟೆ ಅರ್ಪಿಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸೌತಡ್ಕ ದೇವಸ್ಥಾನಕ್ಕೆ ಗಂಟೆ ಅರ್ಪಿಸಲಾಯಿತು. ದಿನೇಶ್ ರೈ ಅವರ ಪತ್ನಿ ರಾಧಿಕಾ ಡಿ. ರೈ , ಮಕ್ಕಳಾದ ಹರ್ಷಲ್ ಡಿ. ರೈ ಮತ್ತು ಜನ್ಯ ಡಿ. ರೈ ಉಪಸ್ಥಿತರಿದ್ದರು.


