ಪುತ್ತೂರು: ನರಿಮೊಗರು ಕೋಲಾಡಿಯ ಕೃಷಿಕ ವಿ. ಈಶ್ವರಯ್ಯ ಅವರ ತೋಟದಲ್ಲಿ ಬೆಳೆದ ತೆಂಗಿನ ಕಾಯಿಯೊಂದು (ಸಿಪ್ಪೆ ಸುಳಿದ ಬಳಿಕ) ಬರೋಬ್ಬರಿ 1.300 ಕಿ.ಗ್ರಾಂ ತೂಗುವ ಮೂಲಕ ಆಶ್ಚರ್ಯ ಮೂಡಿಸಿದೆ.
ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ವಿ ಈಶ್ವರಯ್ಯ ನಿವೃತ್ತಿ ಬಳಿಕ ಕೋಲಾಡಿಯಲ್ಲಿ ಕೃಷಿಭೂಮಿ ಖರೀದಿಸಿ ಕೃಷಿ ಕಾಯಕದಲ್ಲಿ ತೊಡಗಿಸಿ ಕೊಂಡಿದ್ದಾರೆ. ಅಪರೂಪದ 2 ಕಣ್ಣಿನ ತೆಂಗಿನ ಕಾಯಿ ಮತ್ತು 4 ಕಣ್ಣಿನ ಕಾಯಿಯು ಇವರ ಸಂಗ್ರಹದಲ್ಲಿದೆ. ಈ ಹಿಂದೆ ಕುಮಟಾ ತಾಲೂಕಿನ ಕೋನಳ್ಳಿ ಗ್ರಾಮದ ಶೆಟ್ರಕೇರಿಯ ವಿನಾಯಕ ಶೇಟ್ ಅವರ ತೋಟದಲ್ಲಿ ಬೆಳೆದ ತೆಂಗಿನ ಕಾಯಿ 1.160 ಕಿ.ಗ್ರಾಂ ತೂಗುವ ಮೂಲಕ ಅಚ್ಚರಿ ಮೂಡಿಸಿ ಸುದ್ದಿಯಾಗಿತ್ತು. ಆದರೆ ಮಾಲ್ದೀವ್ಸ್ ನ ಮತ್ತು ಪಿಲಿಪೈನ್ಸ್ ನ ತೆಂಗಿನಕಾಯಿಯ ತೂಕ ದಾಖಲೆಯಾಗಿಯೇ ಉಳಿದಿದೆ.

ನಮ್ಮ ತೋಟದಲ್ಲಿ ಕೆಲವು ತೆಂಗಿನ ಮರಗಳಿವೆ ಅದರಲ್ಲಿ ಕೆಲವು ತೆಂಗಿನ ಮರದ ಕಾಯಿಗಳು ಹೆಚ್ಚಾಗಿ 1.200,1.350 ಗ್ರಾಂ ಗಾತ್ರ ಇವೆ. ಮುಂದೆ ಸಿಕ್ಕರೆ ಫೋಟೋ ಕಳುಹಿಸುತ್ತೇನೆ.
Mangalore
Vivian fernandes ನಿಮ್ಮ ನಂಬರ್ ಕೊಡಿ[email protected]