ರಾಮಕುಂಜ ಪ್ರೌಢಶಾಲಾ ಮಂತ್ರಿ ಮಂಡಲ – ಶಾಲಾ ನಾಯಕ-ವಿಖ್ಯಾತ್, ಉಪನಾಯಕ-ಪವನ್

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ 2025-26ನೇ ಸಾಲಿನ ವಿದ್ಯಾರ್ಥಿ ಪರಿಷತ್‌ಗೆ ಚುನಾವಣೆಯು ಜೂ.14ರಂದು ಮುಖ್ಯೋಪಾಧ್ಯಾಯರಾದ ಸತೀಶ್ ಭಟ್‌ರವರ ನೇತೃತ್ವದಲ್ಲಿ ನೆರವೇರಿತು.


ಶಾಲಾ ನಾಯಕನಾಗಿ 10ನೇ ತರಗತಿಯ ವಿಖ್ಯಾತ್ ಎಸ್., ಉಪನಾಯಕನಾಗಿ 9ನೇ ತರಗತಿಯ ಪವನ್ ಬಿ ಹಾಗೂ ಕಾರ್ಯದರ್ಶಿಯಾಗಿ 10ನೇ ತರಗತಿಯ ವೀಣಾ ಎ., ಆಯ್ಕೆಯಾದರು. ಇವಿಎಂ, ಸಿಮ್ಯುಲೇಟರ್ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಮತದಾನ ಪ್ರಕ್ರಿಯೆಯನ್ನು ನಡೆಸಲಾಯಿತು. ಶಾಲೆಯ ಎಲ್ಲಾ ಸಹ ಶಿಕ್ಷಕರು ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here